ಇತರೆ, ರಾಷ್ಟ್ರೀಯ, ಸ್ಥಳೀಯ

ತಮಿಳುನಾಡು ಚುನಾವಣೆ: ಬಿಜೆಪಿಯ 27 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ – ಅಣ್ಣಾಮಲೈ ಹೊರಗೆ !?, 5 ಮಹಿಳೆಯರಿಗೆ ಅವಕಾಶ!

ಚೆನ್ನೈ: ತಮಿಳುನಾಡು ರಾಜಕೀಯ ಕಣ ತೀವ್ರಗೊಳ್ಳುತ್ತಿರುವ ನಡುವೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಮಹತ್ವದ ಹೆಜ್ಜೆ ಇಟ್ಟಿದೆ. ಶುಕ್ರವಾರ ಪಕ್ಷವು 27 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಚುನಾವಣಾ ರಣತಂತ್ರಕ್ಕೆ ಹೊಸ ತಿರುವು ನೀಡಿದೆ.
ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ, ಈ ಬಾರಿ ಸಮತೋಲನದ ಅಭ್ಯರ್ಥಿ ಆಯ್ಕೆಗೆ ಒತ್ತು ನೀಡಿದಂತಿದೆ. ವಿಶೇಷವಾಗಿ ಮಹಿಳೆಯರಿಗೆ ನೀಡಿದ ಆದ್ಯತೆ ಗಮನಾರ್ಹವಾಗಿದೆ.
ಪಟ್ಟಿಯಲ್ಲಿ ತಮಿಳಿಸೈ ಸೌಂದರರಾಜನ್, ವನತಿ ಶ್ರೀನಿವಾಸನ್, ಕೀರ್ತಿಕಾ ಶಿವಕುಮಾರ್, ಕವಿತಾ ಶ್ರೀಕಾಂತ್ ಹಾಗೂ ವಿಜಯಧರಣಿ ಸೇರಿದಂತೆ ಐದು ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಮಹಿಳಾ ಪ್ರತಿನಿಧಿತ್ವ ಹೆಚ್ಚಿಸಲು ಪಕ್ಷ ಪ್ರಯತ್ನಿಸುತ್ತಿದೆ ಎಂಬ ಸಂದೇಶ ಸ್ಪಷ್ಟವಾಗಿದೆ.
ಆದರೆ, ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರಿಗೆ ಈ ಬಾರಿ ಟಿಕೆಟ್ ನೀಡದಿರುವುದು ಅಚ್ಚರಿ ಮೂಡಿಸಿದೆ. ಅವರ ಹೊರಗುಳಿಯುವಿಕೆ ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗಿರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಒಟ್ಟಾರೆ, ಬಿಜೆಪಿ ಬಿಡುಗಡೆ ಮಾಡಿದ ಈ ಪಟ್ಟಿ ಮತ್ತು ಎಐಎಡಿಎಂಕೆ ಜೊತೆಗಿನ ಮೈತ್ರಿ ತಮಿಳುನಾಡು ಚುನಾವಣಾ ಕಣವನ್ನು ಇನ್ನಷ್ಟು ರಂಗೇರಿಸುವ ಸೂಚನೆ ನೀಡಿದೆ.
m

Related Posts