Featured, ಇತರೆ, ಸ್ಥಳೀಯ

ದ್ವಿತೀಯ ಪಿ ಯು ಸಿ ಫಲಿತಾಂಶ ಹನಾ ಫಾತಿಮಾ ಅರಂತೋಡು ಡಿಸ್ಟಿಂಕ್ಷನ್

ಅರಂತೋಡು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅರಂತೋಡು ನೆಹರು ಮೆಮೋರಿಯಲ್ ಪ್ರೀ-ಯುನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿನಿ ಹನಾ ಫಾತಿಮಾ ಅವರು ಉತ್ತಮ ಸಾಧನೆ ಮಾಡಿದ್ದು, ವಾಣಿಜ್ಯ ವಿಭಾಗದಲ್ಲಿ 555 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.
ಹನಾ ಫಾತಿಮಾ ಅವರು ಅರಂತೋಡು ನಿವಾಸಿಗಳಾದ ಕೆ. ಎಂ. ಉಸ್ಮಾನ್ ಮತ್ತು ಅನೀಸ ದಂಪತಿಗಳ ಪುತ್ರಿಯಾಗಿದ್ದು, ತಮ್ಮ ಪರಿಶ್ರಮ ಮತ್ತು ಶ್ರಮದ ಫಲವಾಗಿ ಈ ಸಾಧನೆ ಸಾಧಿಸಿದ್ದಾರೆ.
ಅವರ ಈ ಸಾಧನೆಗೆ ಕಾಲೇಜಿನ ಶಿಕ್ಷಕರು, ಬಂಧು-ಬಳಗ ಮತ್ತು ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.
m

Related Posts