ಸುಳ್ಯ : 2026ನೇ ಸಾಲಿನ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10ನೇ ತರಗತಿ ಫಲಿತಾಂಶದಲ್ಲಿ ಸುಳ್ಯದ ಕೆ.ವಿ.ಜಿ. ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಆಯಿಶತ್ ಉಮ್ಮುಲ್ ಫಿಧಾ ಕೆ.ಇ. ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ.

ಇವರು ಒಟ್ಟು 93.2% ಅಂಕಗಳನ್ನು ಪಡೆದು ಉತ್ತಮ ಫಲಿತಾಂಶ ಸಾಧನೆ ಸಾಧಿಸಿದ್ದಾರೆ. ವಿಷಯವಾರು ಅಂಕಗಳಲ್ಲಿ ಇಂಗ್ಲಿಷ್‌ನಲ್ಲಿ 87 (67+20), ಕನ್ನಡದಲ್ಲಿ 93 (73+20), ಗಣಿತ (ಬೇಸಿಕ್)ದಲ್ಲಿ 94 (74+20), ವಿಜ್ಞಾನದಲ್ಲಿ 86 (66+20), ಸಾಮಾಜಿಕ ವಿಜ್ಞಾನದಲ್ಲಿ 93 (73+20) ಹಾಗೂ ಮಾರ್ಕೆಟಿಂಗ್ ಮತ್ತು ಸೇಲ್ಸ್‌ನಲ್ಲಿ 99 (49+50) ಅಂಕಗಳನ್ನು ಗಳಿಸಿದ್ದಾರೆ.
ಇವರು ಸುಳ್ಯ ಅಜ್ಜಾವರ ಮೇನಾಲ ಎರಂತಮಜಲು ನಿವಾಸಿ, ಅಬ್ದುಲ್ ಕಮಾಲ್ ಅಮ್ಜಾದಿ ಹಾಗೂ ತಾಹಿರಾ ಜಿ.ಎಂ ದಂಪತಿಗಳ ಪುತ್ರಿಯಾಗಿದ್ದಾರೆ. ವಿಧ್ಯಾರ್ಥಿನಿಯ ಈ ಸಾಧನೆಗೆ ಕುಟುಂಬದವರು, ಶಿಕ್ಷಕರು ಹಾಗೂ ಸ್ನೇಹಿತರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.





m
