Featured, ಇತರೆ, ಸ್ಥಳೀಯ

ಅಮೇರಿಕಾದ ಗ್ಲೋಬಲ್ ಮೀಟ್‌ಗೆ ಸುಳ್ಯದ ಹಬೀಬ್ ರೆಹ್ಮಾನ್ ಆಯ್ಕೆ : ಏಕೈಕ ಭಾರತೀಯ ಪ್ರತಿನಿಧಿಯಾಗಿ ಗೌರವ

ಸುಳ್ಯ : ಸುಳ್ಯದ ಕೆ.ಬಿ. ಹಬೀಬ್ ರೆಹ್ಮಾನ್ ಅವರು ಅಮೇರಿಕಾದ ಟೆಕ್ಸಾಸ್‌ನಲ್ಲಿ ನಡೆಯಲಿರುವ “Fossil Finance Global Meet”ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದು, ಈ ಮೂಲಕ ಭಾರತದ ವಿವಿಧ ಭಾಗಗಳಿಂದ ಫಾಸಿಲ್ ಕಂಪನಿಯ ಏಕೈಕ ಪ್ರತಿನಿಧಿಯಾಗಿ ಅಮೇರಿಕಾ ಪ್ರವಾಸ ಕೈಗೊಂಡಿದ್ದಾರೆ.

ಬೆಂಗಳೂರು ಮೂಲದ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಅವರು, ಪ್ರಸ್ತುತ ಫಾಸಿಲ್ ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿ ಕ್ಷೇತ್ರದಲ್ಲಿ ತಮ್ಮ ಸಾಧನೆಯ ಮೂಲಕ ಈ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾಗವಹಿಸುವ ಅವಕಾಶ ಪಡೆದಿರುವುದು ಗಮನಾರ್ಹವಾಗಿದೆ.
ಹಬೀಬ್ ರೆಹ್ಮಾನ್ ಅವರು ಸುಳ್ಯದ ಗಾಂಧಿನಗರದ ನಾವೂರು ನಿವಾಸಿಗಳಾಗಿದ್ದು, ಹಿರಿಯ ಉದ್ಯಮಿ ಹಾಜಿ ಕೆ.ಬಿ. ಮಹಮ್ಮದ್ ಮತ್ತು ಖದೀಜ ಹಜ್ಜುಮ್ಮ ದಂಪತಿಗಳ ಪುತ್ರರಾಗಿದ್ದಾರೆ.

m

Related Posts