Featured, ಇತರೆ, ಸ್ಥಳೀಯ

ಜಟ್ಟಿಪಳ್ಳದಲ್ಲಿ ನಾಳೆ ಪೊಲೀಸ್ ಜನಸ್ಪಂದನ ಸಭೆ: ಸಾರ್ವಜನಿಕರ ಭಾಗವಹಿಸಲು ವಿನಂತಿ

ಸುಳ್ಯ: ಸುಳ್ಯ ಕಸಬಾ ಗ್ರಾಮದ ಜಟ್ಟಿಪಳ್ಳ, ಕಾನತ್ತಿಲ, ಬೊಳಿಯಮಜಲು, ಸೂರ್ತಿಲ ಹಾಗೂ ಸುತ್ತಮುತ್ತಲಿನ ಪರಿಸರ ವಾಸಿ  ಸಾರ್ವಜನಿಕರಿಗಾಗಿ ಸುಳ್ಯ ಪೊಲೀಸ್ ಠಾಣೆ ವತಿಯಿಂದ ಪೊಲೀಸ್ ಜನಸ್ಪಂದನ ಸಭೆ ಆಯೋಜಿಸಲಾಗಿದೆ.
ನಾಳೆ ಸಂಜೆ 5:00 ಗಂಟೆಗೆ ಜಟ್ಟಿಪಳ್ಳ ಕಪಿಲ ಯುವಕ ಮಂಡಲದ ಯುವ ಸಧನ ಬಳಿ ಈ ಸಭೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳು, ದೂರುಗಳು ಹಾಗೂ ಸಲಹೆಗಳನ್ನು ನೇರವಾಗಿ ಪೊಲೀಸ್ ಅಧಿಕಾರಿಗಳಿಗೆ ತಿಳಿಸುವ ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯ ಸಮಸ್ಯೆಗಳ ಪರಿಹಾರ ಹಾಗೂ ಪೊಲೀಸ್–ಜನರ ನಡುವಿನ ಸಂವಹನವನ್ನು ಬಲಪಡಿಸುವ ಉದ್ದೇಶದಿಂದ ಈ ಸಭೆ ನಡೆಯುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಭೆಗೆ ಸಂಬಂಧಿಸಿದ ಪ್ರದೇಶದ ಎಲ್ಲಾ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ಸುಳ್ಯ ಪೊಲೀಸ್ ಠಾಣೆ  ವಿನಂತಿಸಿದೆ

m

Related Posts