ಅಧ್ಯಕ್ಷರಾಗಿ – ಇಬ್ರಾಹಿಂ ಎ ಕೆ, ಪ್ರಧಾನ ಕಾರ್ಯದರ್ಶಿ – ರಜಾಕ್ ಸೂಪರ್ ಅಯ್ಕೆ
ಸಂಪಾಜೆ : ಕಲ್ಲುಗುಂಡಿ ಮುಹಿಯದ್ದೀನ್ ಜುಮ್ಮಾ ಮಸೀದಿ ಅಧೀನದ ಸಿರಾಜುಲ್ ಇಸ್ಲಾಂ ಅಸೋಸಿಯೇಷನ್‌ನ 2026-27ನೇ ಸಾಲಿನ ನೂತನ ಸಮಿತಿ ರಚನಾ ಸಭೆಯು ಮೇ 5ರಂದು ನಡೆಯಿತು. ಖತೀಬ್ ನಾಸಿರ್ ದಾರಿಮಿ ಉಸ್ತಾದ್ ಅವರು ದುಆ ನೆರವೇರಿಸಿದರು. ಸಂಘಟನೆಯ ಅಧ್ಯಕ್ಷ ಎ.ಕೆ. ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ರಝಕ್ ಸೂಪರ್ ವರದಿ ಮಂಡಿಸಿದರು. ಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು
ಅಧ್ಯಕ್ಷರು : ಎ.ಕೆ. ಇಬ್ರಾಹಿಂ, ಉಪಾಧ್ಯಕ್ಷರು : ಜಲೀಲ್ ಭಾರತ್
ಪ್ರಧಾನ ಕಾರ್ಯದರ್ಶಿ : ರಜಾಕ್ ಸೂಪರ್ ಕಾರ್ಯದರ್ಶಿ : ಫಾರೂಕ್ ಕಾನಕ್ಕೋಡ್, ಜತೆ ಕಾರ್ಯದರ್ಶಿ: ರುಶೈದ್ ಕೆ.ಎಂ, ಕೋಶಾಧಿಕಾರಿ : ಆಶಿಕ್ ಕೆ.ಎಚ್ ಇವರು ಆಯ್ಕೆಯಾದರು ಸದಸ್ಯರಾಗಿ ಲತೀಫ್ ಗುಲ್ಮಕಜೆ, ಮುನೀರ್ ಕೆ.ಎಂ, ಅಲಿ ಕೆ.ಇ, ಶಂಶೀದಲಿ ಎಚ್.ಎ, ಅರ್ಷಾಬ್ ಕೆ.ಎ, ನಿಜಾಮ್ ಎಸ್.ಎ, ಹಸೈನ್ ಸಿ.ಎ ಹಾಗೂ ಮಿರ್ಷಾದ್ ನೆಲ್ಲಿಕುಮೇರಿ ಸದಸ್ಯರನ್ನಾಗಿ ಆಯ್ಕೆಮಾಡಲಾಯಿತು
