ರಝಾಕ್ ಕೆ.ಎಂ ಅಧ್ಯಕ್ಷ, ಮೊಯಿದೀನ್ ಶಮ್ಮಾಸ್ ಪ್ರಧಾನ ಕಾರ್ಯದರ್ಶಿ, ಸಿದ್ದೀಕ್ ಸಿ.ಎ ಕೋಶಾಧಿಕಾರಿಯಾಗಿ ಆಯ್ಕೆ

ಸುಳ್ಯ : ಗ್ರೀನ್ ಬಾಯ್ಸ್ ಅಸೋಸಿಯೇಷನ್ (ರಿ.) ಜಟ್ಟಿಪಳ್ಳ ಇದರ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಸಂಘಟನೆಯ ಗೌರವ ಅಧ್ಯಕ್ಷರಾದ ರಶೀದ್ ಜಟ್ಟಿಪಳ್ಳ ಅವರ ಅಧ್ಯಕ್ಷತೆಯಲ್ಲಿ ಮಾಜಿ ಅಧ್ಯಕ್ಷರಾದ ರಝಾಕ್ ಕೊಡಿಯಾಲಬೈಲು ಅವರ ನಿವಾಸದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಶರೀಫ್ ಜಟ್ಟಿಪಳ್ಳ, ನಿಕಟ ಪೂರ್ವ ಅಧ್ಯಕ್ಷ ಸಿಯಾಬ್ ಷಾ,ಮಾಜಿ ಅಧ್ಯಕ್ಷ ರಝಾಕ್ ಕೊಡಿಯಾಲಬೈಲು ಉಪಸ್ಥಿತರಿದ್ದರು
ನೂತನ ಪದಾಧಿಕಾರಿಗಳು
ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು
ಗೌರವ ಅಧ್ಯಕ್ಷರು : ರಶೀದ್ ಜಟ್ಟಿಪಳ್ಳ
ಅಧ್ಯಕ್ಷರು : ರಝಾಕ್ ಕೆ.ಎಂ
ಉಪಾಧ್ಯಕ್ಷರು : ಸಿಯಾಬ್ ಸಿ.ಎ
ನಿಕಟಪೂರ್ವ ಅಧ್ಯಕ್ಷರು : ಸಿಯಾಬ್ ಷಾ
ಪ್ರಧಾನ ಕಾರ್ಯದರ್ಶಿ : ಮೊಯಿದೀನ್
ಜಂಟಿ ಕಾರ್ಯದರ್ಶಿಗಳು : ಸಿಯಾಬುದ್ದೀನ್ ಜೆ.ಎಂ ಹಾಗೂ ಬದ್ರುದ್ದೀನ್
ಕೋಶಾಧಿಕಾರಿ : ಸಿದ್ದೀಕ್ ಸಿ.ಎ
ಸಂಘಟನಾ ಕಾರ್ಯದರ್ಶಿಗಳು : ರಹೀಮ್ ಹಾಗೂ ನಾಸಿರ್ ಸಿ.ಎ
ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮ ಉಸ್ತುವಾರಿ : ನಿಝಾರ್ ಜಟ್ಟಿಪಳ್ಳ ಹಾಗೂ ಖಾದರ್ ಜಟ್ಟಿಪಳ್ಳ
ನಿರ್ದೇಶಕರು : ಇಮ್ರಾನ್ ಅಮೈ
ನೂತನ ಸಮಿತಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.




m
