Featured, ಇತರೆ, ಸ್ಥಳೀಯ

ಪೆರಾಜೆ ಜಮಾಅತ್ ಕಮಿಟಿ ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭ

ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಖುವ್ವತುಲ್ ಇಸ್ಲಾಂ ಮದರಸ ಅಧ್ಯಾಪಕರಾದ ಇಸ್ಮಾಯಿಲ್ ಅಹ್ಸನಿ ಉಸ್ತಾದ್ ಹಾಗೂ ಪೆರಾಜೆ ಜಮಾಅತ್ ಸದಸ್ಯರಾದ ಮೊಯ್ದೀನ್ ಪಿ.ಎ. ರವರಿಗೆ ಯಾತ್ರಾ ಬೀಳ್ಕೊಡುಗೆ ಸಮಾರಂಭವು ಮೇ 8, 2026ರಂದು ಶುಕ್ರವಾರ ಜುಮಾ ನಮಾಝ್ ಬಳಿಕ ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಜಮಾಅತ್ ಖತೀಬರಾದ ಬನಾರಿ ಯೂಸುಫ್ ಕಾಮಿಲ್ ಸಖಾಫಿ ಅವರು ಮಾತನಾಡಿ, ಹಜ್ ಯಾತ್ರೆ ಯಶಸ್ವಿಯಾಗಿ ನೆರವೇರಲೆಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಮಾಅತ್ ಸದಸ್ಯರು, ಧಾರ್ಮಿಕ ಮುಖಂಡರು ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ಹಜ್ ಯಾತ್ರಾರ್ಥಿಗಳಿಗೆ ಶುಭಾಶಯ ಕೋರಿದರು.

m

Related Posts