ಈಶ್ವರಮಂಗಲ: ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿದ್ಯಾ ಸಂಸ್ಥೆಯಾದ ತ್ವೈಬಾ ಎಜುಕೇಶನ್ ಸೆಂಟರ್ ನಲ್ಲಿ ಇಂದು ಮೇ 9 ರಂದು ಸಂಜೆ 7 ಗಂಟೆಗೆ ‘ನಾರಿಯತು ಸ್ವಲಾತ್’ ಮಜ್ಲಿಸ್ ಹಾಗೂ ಮರ್ಹೂಂ ಸಯ್ಯಿದ್ ಪೂಕುಂಞಿ ತಂಙಳ್ ಅಲ್ ಅಹ್ದಲ್ (ನ.ಮ) ಅವರ ಅನುಸ್ಮರಣಾ ಸಂಗಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಯ್ಯಿದ್ ಕಣ್ಣವಂ ತಂಙಳ್, ಸಯ್ಯಿದ್ ಉಮರ್ ಜಿಫ್ರಿ ತಂಙಳ್, ಸಯ್ಯಿದ್ ಇಸ್ಮಾಯಿಲ್ ಅಲ್ ಅಹ್ದಲ್ ತಂಙಳ್, ರಫೀಕ್ ಸಅದಿ ದೇಲಂಪಾಡಿ ಸೇರಿದಂತೆ ಹಲವು ಉಲಮಾಗಳು ಭಾಗವಹಿಸಲಿದ್ದಾರೆ.
ಈ ಪುಣ್ಯದಾಯಕ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ, ಯಶಸ್ವಿಗೊಳಿಸಬೇಕೆಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




m
