Featured, ಇತರೆ, ಸ್ಥಳೀಯ

ವೈದ್ಯರ ನಿರ್ಲ್ಯಕ್ಷಕ್ಕೆ ಯುವಕ ಬಲಿ : ಎಸ್ಸೆಸ್ಸೆಫ್ ನಿಯೋಗದಿಂದ ಆರೋಗ್ಯ ಸಚಿವ ಹಾಗೂ ಜಿಲ್ಲಾಧಿಕಾರಿ ಭೇಟಿ

ಮಂಗಳೂರು : ಬೆಳ್ತಂಗಡಿ ತಾಲೂಕಿನ ಶರೀಫ್ ಗೇರುಕಟ್ಟೆ ರವರು ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಯ ವೈದ್ಯರ ನಿರ್ಲ್ಯಕ್ಷ ಹಾಗೂ ಬೇಜವಾಬ್ದಾರಿತನಕ್ಕೆ ಬಲಿಯಾಗಿದ್ದು ಪತ್ನಿ ಹಾಗೂ ಮೂರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.
  ಇದು ವೈದ್ಯರ ಬೇಜವಾಬ್ದಾರಿತನದಿಂದ ನಡೆದಿದ್ದು ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಸ್ಸೆಸ್ಸೆಫ್ ವತಿಯಿಂದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ , ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ, ಕಾರ್ಯದರ್ಶಿ ಉಬೈದುಲ್ಲಾ, ಬೆಳ್ತಂಗಡಿ ಡಿವಿಷನ್ ಅಧ್ಯಕ್ಷ ಇಸ್‍ಹಾಖ್, ಅಬ್ದುಲ್ ಕರೀಂ ಗೇರುಕಟ್ಟೆ ಹಾಗೂ ಮೃತ ಶರೀಫ್ ರವರ ಸಹೋದರರು ಉಪಸ್ಥಿತರಿದ್ದರು.

m

 

Related Posts