ಪೈಂಬಚ್ಚಾಲು: ಎಸ್‌ಕೆಎಸ್‌ಎಸ್‌ಎಫ್ ಪೈಂಬಚ್ಚಾಲು ಶಾಖೆಯ ವತಿಯಿಂದ ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉನ್ನತ ಅಂಕಗಳನ್ನು ಗಳಿಸುವ ಊರಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಲಾಗುವ “ಸ್ಕಾಲರ್ಶಿಪ್ 3.0” ಕಾರ್ಯಕ್ರಮವನ್ನು ಈ ವರ್ಷವೂ ಯಶಸ್ವಿಯಾಗಿ ನಡೆಸಲಾಯಿತು
ಇದು ಸತತ ಮೂರನೇ ವರ್ಷದ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮವಾಗಿದ್ದು, “ಸ್ಕಾಲರ್ಶಿಪ್ 3.0” ಹೆಸರಿನಲ್ಲಿ ವಿಶೇಷವಾಗಿ ಆಯೋಜಿಸಲಾಯಿತು. ಈ ಬಾರಿ ಊರಿನ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿನಿಯರು ಸ್ಕಾಲರ್ಶಿಪ್‌ಗೆ ಆಯ್ಕೆಯಾಗಿದ್ದು, ಬಕ್ರೀದ್ ಹಬ್ಬದ ಶುಭ ಸಂದರ್ಭದಲ್ಲಿ ಅವರ ಮನೆಗಳಿಗೆ ಭೇಟಿ ನೀಡಿ ಸ್ಕಾಲರ್ಶಿಪ್ ಹಾಗೂ ಸ್ಮರಣಿಕೆ (ಮೊಮೆಂಟೊ) ನೀಡಿ ಗೌರವಿಸಲಾಯಿತು.
2025–26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 543 ಅಂಕಗಳನ್ನು ಪಡೆದು ಊರಿನ ಕೀರ್ತಿಯನ್ನು ಹೆಚ್ಚಿಸಿದ ಅಸ್ಲೇಮಿಯ ಟಿ.ಐ (ಟಿ.ಎಂ. ಇಬ್ರಾಹಿಂ ಅವರ ಪುತ್ರಿ) ಅವರಿಗೆ ಎಸ್‌ಕೆಎಸ್‌ಎಸ್‌ಎಫ್ ವತಿಯಿಂದ ಅಭಿನಂದನೆ ಸಲ್ಲಿಸಿ ಸ್ಕಾಲರ್ಶಿಪ್ ಪ್ರದಾನಿಸಲಾಯಿತು.
ಅದೇ ರೀತಿ, 2025–26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 506 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ ಫಾತಿಮತ್ ಶಫ್ರಿನ್ (ಹನೀಫ್ ಅವರ ಪುತ್ರಿ) ಅವರಿಗೂ ಅಭಿನಂದನೆಗಳನ್ನು ತಿಳಿಸಿ ಸ್ಕಾಲರ್ಶಿಪ್ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಪೈಂಬಚ್ಚಾಲು ಶಾಖೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು, ವಿದ್ಯಾರ್ಥಿನಿಯರ ಸಾಧನೆಯನ್ನು ಶ್ಲಾಘಿಸಿ, ಮುಂದಿನ ವಿದ್ಯಾಭ್ಯಾಸಕ್ಕೂ ಶುಭ ಹಾರೈಸಿದರು.





m
