ಪುತ್ತೂರು: ವರ್ಷಂಪ್ರತಿ ನಡೆಯುತ್ತಿರುವ, ರಾಷ್ಟ್ರೀಯ ಮಟ್ಟದವರೆಗೆ ಮುಂದುವರಿಯುವ ಎಸ್ಸೆಸ್ಸೆಫ್ ಸಾಹಿತ್ಯೋತ್ಸವ ಇದರ ಪುತ್ತೂರು ಸೆಕ್ಟರ್ ಮಟ್ಟದ ಸಾಹಿತ್ಯೋತ್ಸವವು ಇದೇ ಬರುವ ಜೂನ್ 28 ರಂದು ಪುತ್ತೂರು ಪುರಭವನದಲ್ಲಿ ನಡೆಯಲಿದೆ.
ಇದರ ಅಂಗವಾಗಿ ಮೇ 24 ರಂದು ಬನ್ನೂರಿನಲ್ಲಿ ನಡೆದ ಸಭೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಸಭೆಯನ್ನು ಉದ್ಘಾಟಿಸಿದ ಎಸ್ ವೈ ಎಸ್ ಪುತ್ತೂರು ಸರ್ಕಲ್ ಅಧ್ಯಕ್ಷರಾದ ರಫೀಕ್ ಸಖಾಫಿ ಬಳ್ಳಾರಿ ಯವರು ಮಾತನಾಡಿ ಸಾಹಿತ್ಯೋತ್ಸವ ನಡೆಸುವುದರಿಂದ ವಿದ್ಯಾರ್ಥಿಗಳಿಗೆ, ಕಾರ್ಯಕರ್ತರಿಗೆ ಸಿಗುವ ಪ್ರಯೋಜನವನ್ನು ವಿವರಿಸಿದರು. ಕೆಎಂಜೆ ನಾಯಕರಾದ ಅಬ್ದುಲ್ಲ ಉಸ್ತಾದ್ ಬನ್ನೂರು ಸಂದರ್ಭೋಚಿತವಾಗಿ ಮಾತನಾಡಿದರು.
ಬಳಿಕ ಕೆಎಂಜೆ, ಎಸ್ ವೈ ಎಸ್, ಎಸ್ಸೆಸ್ಸೆಫ್ ನಾಯಕರ ಸಮ್ಮುಖದಲ್ಲಿ ಸ್ವಾಗತ ಸಮಿತಿಯನ್ನು ರೂಪೀಕರಿಸಲಾಯಿತು.
ಸೆಕ್ಟರ್ ಉಪಾದ್ಯಕ್ಷರಾದ ಅಹ್ಮದ್ ಹಾಶಿಮಿ ಅಜ್ಜಿಕಟ್ಟೆ ಸ್ವಾಗತಿಸಿ, ರಾಫಿಹ್ ಮುಸ್ಲಿಯಾರ್ ಬುಳೇರಿಕಟ್ಟೆ ವಂದಿಸಿದರು.
ಸ್ವಾಗತ ಸಮಿತಿ ಪದಾಧಿಕಾರಿಗಳು
ಚೇರ್ಮೇನ್: ರಫೀಕ್ ಸಖಾಫಿ ಬಳ್ಳಾರಿ, ಜ.ಕನ್ವೀನರ್: ಅಬ್ದುಲ್ ಖಾದರ್ ಸಂಟ್ಯಾರ್, ಫಿನಾನ್ಸ್ ಕಂಟ್ರೋಲರ್: ಅಬ್ದುಲ್ ರಹೀಮ್ ಕೆಮ್ಮಾಯಿ, ವೈಸ್ ಚೇರ್ಮೇನ್: ಅಬ್ದುಲ್ಲ ಉಸ್ತಾದ್ ಬನ್ನೂರು, ರಝಾಕ್ ಬನ್ನೂರು, ಜೊತೆ ಕನ್ವೀನರ್: ರಶೀದ್ ಮದನಿ ಸಂಪ್ಯ, ಉವೈಸ್ ಬೀಟಿಗೆ, ಪ್ರೋಗ್ರಾಂ ಇನ್ ಚಾರ್ಜ್: ಅಬ್ದುಲ್ ಮಜೀದ್ ಬನ್ನೂರು, ಕೋರ್ಡಿನೇಟರ್: ಅಬ್ದುಲ್ ಅಝೀಝ್ ಚೆನ್ನಾರ್.
ಎಕ್ಸಿಕ್ಯೂಟಿವ್ಸ್
ಇಕ್ಬಾಲ್ ಬಪ್ಪಳಿಗೆ, ರಿಯಾಝ್ ಪಾಪ್ಲಿ ಬನ್ನೂರು, ರಝಾಕ್ ಸಅದಿ ಕೊಡಿಪ್ಪಾಡಿ, ಅಝೀಝ್ ಕಲ್ಲರ್ಪೆ ಸಂಪ್ಯ, ಇಬ್ರಾಹೀಂ ಬಪ್ಪಳಿಗೆ, ಅಬ್ದುಲ್ ಖಾದರ್ ಸಾಲ್ಮಾರ, ಉಮರ್ ಕೆಮ್ಮಾಯಿ, ಫಾರೂಕ್ ಬನ್ನೂರು, ಉಮರ್ ಪಡೀಲ್, ಇಲ್ಯಾಸ್ ಅಜ್ಜಿಕಟ್ಟೆ, ಕೆ.ಪಿ.ಉಮರ್ ನರಿಮೊಗರು, ಬಷೀರ್ ಅಜ್ಜಿಕಟ್ಟಿ
ವರದಿ: ಬಿಕೆಎಸ್ಎ ಸಂಪ್ಯ





m
