Featured, ಇತರೆ, ಸ್ಥಳೀಯ

ಸುಳ್ಯ ಪೊಲೀಸ್ ಠಾಣೆಯಲ್ಲಿ ನೂತನ ಹೆಡ್ ಕಾನ್‌ಸ್ಟೇಬಲ್ ಆಗಿ ಸ್ಕರಿಯ ಅಧಿಕಾರ ಸ್ವೀಕಾರ

ಸುಳ್ಯ, ಮೇ 30 : ಈ ಹಿಂದೆ 2005ರಿಂದ 2011ರವರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸಿದ್ದ ಸ್ಕರಿಯ ಅವರು ಇದೀಗ ಹೆಡ್ ಕಾನ್‌ಸ್ಟೆಬಲ್ ಆಗಿ ಮತ್ತೆ ಸುಳ್ಯ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಕಳೆದ 29 ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸುತ್ತಿರುವ ಅವರು, ಸುಳ್ಯ ಠಾಣೆಯಲ್ಲಿನ ಸೇವೆಯ ಬಳಿಕ ಪುತ್ತೂರು ನಗರ ಠಾಣೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಮರು ವರ್ಗಾವಣೆಯ ಮೂಲಕ ಸುಳ್ಯ ಪೊಲೀಸ್ ಠಾಣೆಗೆ ಆಗಮಿಸಿರುವುದು ಗಮನಾರ್ಹವಾಗಿದೆ.
ಕಡಬ ತಾಲೂಕು ಬಲ್ಯ ಗ್ರಾಮದ ಮಾತ್ರಡಿ ನಿವಾಸಿಗಳಾದ ದಿವಂಗತ ಎಂ.ಜಿ. ಅಬ್ರಹಾಂ ಹಾಗೂ ದಿವಂಗತ ಸಾರಮ್ಮ ಅಬ್ರಹಾಂ ದಂಪತಿಯ ಪುತ್ರರಾಗಿರುವ ಸ್ಕರಿಯ ಅವರು ತಮ್ಮ ಕರ್ತವ್ಯನಿಷ್ಠೆ ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯಕ್ಕಾಗಿ ಪರಿಚಿತರಾಗಿದ್ದಾರೆ.
m

Related Posts