Featured, ಇತರೆ, ಸ್ಥಳೀಯ

ನೆಟ್ಟಾರ್: ನೂರುಲ್ ಇಸ್ಲಾಂ ಮದ್ರಸಾದಲ್ಲಿ ಮುಅಲ್ಲಿಂ ಡೇ ಆಚರಣೆ; ಎಸ್‌ಕೆಎಸ್‌ಬಿವಿ ವತಿಯಿಂದ ಉಸ್ತಾದ್ ರಫೀಕ್ ಹನೀಫಿ ಅವರಿಗೆ ಸನ್ಮಾನ

ನೆಟ್ಟಾರ್, ಜೂ.21: ಮುಅಲ್ಲಿಂ ದಿನದ ಅಂಗವಾಗಿ ಎಸ್‌ಕೆಎಸ್‌ಬಿವಿ ನೆಟ್ಟಾರ್ ವತಿಯಿಂದ ನೂರುಲ್ ಇಸ್ಲಾಂ ಮದ್ರಸಾದ ಸದರ್ ಮುಅಲ್ಲಿಂ ಉಸ್ತಾದ್ ರಫೀಕ್ ಹನೀಫಿ ಅವರನ್ನು ಸನ್ಮಾನಿಸಿ, ಮುಅಲ್ಲಿಂ ದಿನದ ಶುಭಾಶಯಗಳನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಉಸ್ತಾದ್ ರಫೀಕ್ ಹನೀಫಿ ಅವರ ಶಿಕ್ಷಣ ಸೇವೆ, ಧಾರ್ಮಿಕ ಮಾರ್ಗದರ್ಶನ ಹಾಗೂ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸಿ ವಿಶೇಷವಾಗಿ ಗೌರವಿಸಲಾಯಿತು. ಎಸ್‌ಕೆಎಸ್‌ಬಿವಿ ನೆಟ್ಟಾರ್ ವತಿಯಿಂದ ಸ್ಮರಣಿಕೆ ಹಾಗೂ ಉಡುಗೊರೆಗಳನ್ನು ನೀಡಿ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಜ್ಞಾನ, ನೈತಿಕ ಮೌಲ್ಯಗಳು ಮತ್ತು ಉತ್ತಮ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಮುಅಲ್ಲಿಮರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ಉಸ್ತಾದ್ ರಫೀಕ್ ಹನೀಫಿ ಅವರು ಹಲವು ವರ್ಷಗಳಿಂದ ನೂರುಲ್ ಇಸ್ಲಾಂ ಮದ್ರಸಾ, ನೆಟ್ಟಾರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಪ್ರಶಂಸಿಸಲಾಯಿತು. ಅಲ್ಲಾಹನು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಸೇವೆ ಸಲ್ಲಿಸುವ ತೌಫೀಕ್ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್‌ಕೆಎಸ್‌ಬಿವಿ ನೆಟ್ಟಾರ್‌ನ ಪದಾಧಿಕಾರಿಗಳು, ಸದಸ್ಯರು, ಮದ್ರಸಾದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

m

Related Posts