Featured, ಅಂಕಣ, ಸ್ಥಳೀಯ

ಮಕಾಶಿಫುಲ್ ಖುಲೂಬ್ ದರ್ಸ್ ನಂದಾವರ ವತಿಯಿಂದ ಖಾಝಿ‌ ಶೈಖುನಾ‌ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅನುಸ್ಮರಣೆ

ನಂದಾವರ: ಕೇಂದ್ರ ಜುಮಾ‌ ಮಸೀದಿ‌ ನಂದಾವರ ಇದರ ಅದೀನದಲ್ಲಿರುವ ಮಕಾಶಿಫುಲ್ ಖುಲೂಬ್ ದರ್ಸ್ ಸ್ಟೂಡೆಂಟ್ಸ್ ಅಸೋಸಿಯೇಷನ್ ನಂದಾವರ ಇದರ ವತಿಯಿಂದ ಸಮಸ್ತ ಕೇಂದ್ರ ಮುಶಾವರ ಸದಸ್ಯರೂ, ದ.ಕ ಜಿಲ್ಲಾ ಖಾಝಿಯೂ, ಕೇಂದ್ರ ಜುಮಾ‌ ಮಸೀದಿ‌ ನಂದಾವರ ಖಾಝಿಯೂ ಆಗಿರುವ ಶೈಖುನಾ‌ ತ್ವಾಖಾ ಉಸ್ತಾದರ ಅನುಸ್ಮರಣೆಯು ದಿನಾಂಕ 25 ಜೂನ್ 2026 ಗುರುವಾರ ಸುಬಹಿ‌ ನಮಾಝಿನ‌ ಬಳಿಕ ದರ್ಸ್ ಹಾಲಿನಲ್ಲಿ‌ ನಡೆಯಿತು.

ಸುಬಹಿ ನಮಾಝಿನ ನಂತರ ಮಸೀದಿಯಲ್ಲಿ ಬಹು| ಅಶ್ರಫ್ ಭಾಖವಿ ಉಸ್ತಾದರ ನೇತೃತ್ವದಲ್ಲಿ ಊರಿನ ನೂರಾರು ಮಂದಿಯ ಉಪಸ್ಥಿತಿಯೊಂದಿಗೆ ಕುರ್ಆನ್ ಪಾರಾಯಣ ಹಾಗೂ ದುಆಃ ಸಂಗಮ ನಡೆಯಿತು. ನಂತರ ದರ್ಸ್ ಹಾಲಿನಲ್ಲಿ ಅನುಸ್ಮರಣಾ ಸಂಗಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ದರ್ಸ್ ಸಂಘಟನೆಯ ಕಾರ್ಯದರ್ಶಿ ಶುಹೈಬ್ ಕೊಳ್ತಿಗೆ ಸ್ವಾಗತಿಸಿದರು, ದರ್ಸ್ ಸಂಘಟನೆಯ ಅಧ್ಯಕ್ಷ ಸಯ್ಯಿದ್ ಮುಈನುದ್ದೀನ್ ತಂಙಳ್ ಸಾಲ್ಮರ ಉದ್ಘಾಟಿಸಿ ಸಾಧಾರಣ ಜನರ ಮರಣ ಮತ್ತು ಆಲಿಂಗಳ ಮರಣ ಅಸಮಾನವಾದದ್ದು, ಕಾರಣ ಆಲಿಂ ಮರಣ ಹೊಂದಿದರೆ ಕೇವಲ ಶರೀರವನ್ನು ಮಾತ್ರವಲ್ಲ ದಫನ ಮಾಡುವುದು ಅವರ ಜ್ಙಾನದ ಭಂಡಾರವನ್ನು ಕೂಡ ದಫನ ಮಾಡಲಾಗುತ್ತದೆ. ತ್ವಾಖಾ ಉಸ್ತಾದರು ಅಪಾರ ಪಾಂಡಿತ್ಯವುಳ್ಳ ಜ್ಙಾನದ ಸಾಗರವಾಗಿದ್ದರು ಎಂದು ನುಡಿದರು‌. ನಂತರ ಬಹು| ಅಶ್ರಫ್ ಫಾಝಿಲ್ ಬಾಖವಿ ಉಸ್ತಾದರು ತ್ವಾಖಾ ಉಸ್ತಾದರು ಸಮುದಾಯಕ್ಕೆ ನೀಡಿದ ಸೇವೆ ಅವರ ತ್ಯಾಗ ಅವಿಸ್ಮರಣೀಯವಾದದ್ದು. ನಮಗೆ ನಷ್ಟವಾದದ್ದು ಕೇವಲ ಒಂದು ಶರೀರವಲ್ಲ, ಈ ಸಮುದಾಯದ ಒಂದು ಶಕ್ತಿಯನ್ನೇ ಕಳಚಿದಂತಾಗಿದೆ. ಅವರು ಜ್ಙಾನದ ದೀಪವಾಗಿದ್ದರು, ಧೈರ್ಯದಿಂದ ಸಮುದಾಯಕ್ಕೆ ಧ್ವನಿ ಎತ್ತುವ ಬೆಟ್ಟವಾಗಿದ್ದರು, ತಾಳ್ಮೆಯ ತೊಟ್ಟಿಲಾಗಿದ್ದರು. ಅವರ ಅಗಲುವಿಕೆಗೆ ಸಮುದಾಯಕ್ಕೆ ತಾಳಲಾರದ ನಷ್ಟವುಂಟುಮಾಡಿದೆ ಎಂದು ಅನುಸ್ಮರಣಾ ಭಾಷಣಗೈದರು.

ಕಾರ್ಯಕ್ರಮದಲ್ಲಿ ಮಕಾಶಿಫುಲ್ ಖುಲೂಬ್ ಸಂಘಟನೆಯ ಕಾರ್ಯಕಾರಿ ಸಮಿತಿ ಸದಸ್ಯರು ಮುತಾಲ್ಲಿಮರು ಉಪಸ್ಥಿತರಿದ್ದರು.

m

Related Posts