Featured, ಇತರೆ, ಸ್ಥಳೀಯ

ಶಾಂತಿನಗರದಲ್ಲಿ ಮತದಾರರಿಗಾಗಿ SIR ಗಣತಿ ನಮೂನೆ ಭರ್ತಿ ಹಾಗೂ ಮಾಹಿತಿ ಕಾರ್ಯಕ್ರಮ

ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್, ಶಾಂತಿನಗರ ಇದರ ವತಿಯಿಂದ ನೂರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಶಾಂತಿನಗರ ವಾರ್ಡ್‌ನ ಎಲ್ಲಾ ಮತದಾರರ ಅನುಕೂಲಕ್ಕಾಗಿ SIR (Special Intensive Revision) ಪ್ರಕ್ರಿಯೆಯ ಅಂಗವಾಗಿ Enumeration Form (ಗಣತಿ ನಮೂನೆ) ಭರ್ತಿ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮವನ್ನು ದಿನಾಂಕ ಜುಲೈ 10 ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಅಬ್ದುರ್ರಶೀದ್ ಝೈನಿ ಉಸ್ತಾದರು ಉದ್ಘಾಟಿಸಿದರು.

ಪ್ರಸ್ತುತ ಚುನಾವಣಾ ಆಯೋಗದ SIR ಪ್ರಕ್ರಿಯೆಯಲ್ಲಿ Enumeration Form ಭರ್ತಿ ಮಾಡುವುದು ಅತ್ಯಂತ ಮಹತ್ವದ್ದಾಗಿದ್ದು, ಶಾಂತಿನಗರ ವಾರ್ಡ್‌ನ ಅರ್ಹ ಮತದಾರರು ತಮ್ಮ ಗಣತಿ ನಮೂನೆಗಳನ್ನು ಭರ್ತಿ ಮಾಡಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.

ಈ ಕಾರ್ಯಕ್ರಮದಲ್ಲಿ ಕೆ.ಪಿ. ಪಳ್ಳಿಕುಂಞ, ಅಬೂಬಕ್ಕರ್ ಎ., ಅಬ್ದುರ್ರಶೀದ್ ಝೈನಿ ಉಸ್ತಾದ್, ಲತೀಫ್ ಬಿ., ಅಬ್ದುಲ್ ಖಾದರ್ (ಅಂದು), ಎಸ್.ಎಂ. ಅಬ್ದುಲ್ಲ, ಲತೀಫ್ ದುಬೈ, ಕಬೀರ್ ಜಟ್ಟಿಪಳ್ಳ, ಹನೀಫ್ ಆರ್.ಸಿ.ಸಿ., ಕಮಾಲ್ ಕಡಬ, ಇಸ್ಮಾಯಿಲ್, ಅಯ್ಯೂಬ್, ಅಶ್ರಫ್ ಆದರ್ಶ, ಅಶ್ರಫ್ (ಅಚ್ಚಪ್ಪು),  ಜುಬೈರ್ , ಶುಹೈಬ್,
ಬುಶ್ರ ಲತೀಫ್ ,ಜುಹರ ಅಮೀನ್, ಬುಶ್ರ ರಜಾಕ್, ಸೇರಿದಂತೆ ಹಲವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಕೊನೆಯಲ್ಲಿ ಅಬ್ದುಲ್ ಖಾದರ್ (ಅಂದು) ಅವರು ಧನ್ಯವಾದಗಳನ್ನು ಸಲ್ಲಿಸಿದರು. ಎಲ್ಲರ ಸಹಕಾರದೊಂದಿಗೆ ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ನಡೆದು ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.

m

Related Posts