Featured, ಇತರೆ, ಸ್ಥಳೀಯ

ಜುಲೈ 14ರಂದು ಮಂಗಳೂರಿನಲ್ಲಿ ಉದ್ಯೋಗ ಮೇಳ – ವಿವಿಧ ಖಾಸಗಿ ಸಂಸ್ಥೆಗಳ ನೇರ ನೇಮಕಾತಿ ಸಂದರ್ಶನ

ಜುಲೈ 14ರಂದು ಮಂಗಳೂರಿನಲ್ಲಿ ವಿವಿಧ ಖಾಸಗಿ ಸಂಸ್ಥೆಗಳ ನೇಮಕಾತಿಗಾಗಿ ನೇರ ಸಂದರ್ಶನ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಇಂದ ಪದವೀಧರರು ಹಾಗೂ ಐಟಿಐ/ಡಿಪ್ಲೊಮಾ ಅಭ್ಯರ್ಥಿಗಳು ಬಯೋಡೇಟಾ ಜೊತೆಗೆ ಭಾಗವಹಿಸಬಹುದು.

ಉದ್ಯೋಗ ಅರಸುತ್ತಿರುವ ಯುವ ಜನತೆಗೆ ಮತ್ತೊಂದು ಉತ್ತಮ ಅವಕಾಶ ಲಭ್ಯವಾಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್, ಗೋಲ್ಡನ್ ವಿಂಗ್ಸ್ ಲಿಫ್ಟ್ ಅಂಡ್‌ ಎಲಿವೇಟರ್ಸ್‌ ಪ್ರೈವೇಟ್ ಲಿಮಿಟೆಡ್ ಹಾಗೂ ಸಂಭವ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಜುಲೈ 14ರಂದು ನೇರ ಸಂದರ್ಶನ

ಸಂದರ್ಶನವು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಮಂಗಳೂರಿನ ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಆವರಣದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಡೆಯಲಿದೆ.

ನೇಮಕಾತಿ ನಡೆಯಲಿರುವ ಹುದ್ದೆಗಳಲ್ಲಿ ಅಸಿಸ್ಟಂಟ್ ಮ್ಯಾನೇಜರ್, ಹೆಚ್.ಆರ್. ಮತ್ತು ಟೆಲಿಕಾಲಿಂಗ್, ಸೇಲ್ಸ್ ಎಕ್ಸಿಕ್ಯೂಟಿವ್, ಲಿಫ್ಟ್ ಟೆಕ್ನಿಷಿಯನ್, ಇ.ವಿ. ಎಲೆಕ್ನಿಷಿಯನ್, ಎಲೆಕ್ನಿಷಿಯನ್, ಸಿಎನ್‌ಸಿ ಆಪರೇಟ‌ರ್ ಹಾಗೂ ಹೆಲ್ಪರ್ ಹುದ್ದೆಗಳು ಸೇರಿವೆ.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಯಾವುದೇ ಪದವಿ, ಐಟಿಐ ಅಥವಾ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ತಮ್ಮ ಸ್ವ-ವಿವರವುಳ್ಳ ಬಯೋಡೇಟಾ (Resume) ಜೊತೆಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಂಗಳೂರು ಹಾಗೂ ಬೆಂಗಳೂರು ನಗರಗಳಲ್ಲಿ ಉದ್ಯೋಗದ ಅವಕಾಶವಿದೆ.

m

Related Posts