ಅಲ್ ಅಮೀನ್ ಸಾರ್ವಜನಿಕ ಸೇವೆ ಶ್ಲಾಘನೀಯ – ಅಶ್ರಫ್ ಸಖಾಫಿ ಅಲ್ ಮಳ್ಹರಿ
ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ ರಿ ಗೂನಡ್ಕ ವತಿಯಿಂದ ಮತದಾರರ ತೀವ್ರ ಪಟ್ಟಿ ಪರಿಷ್ಕರಣೆ ಎಸ್ ಐ ಆರ್ ಫಾರಂ ತುಂಬುವ ಮಾಹಿತಿ ಹಾಗೂ ಹೆಲ್ಪ್ ಕಾಂಪೈನ್ ಹುಳಿಯಂಗಡಿ ಗೂನಡ್ಕ ಕಛೇರಿಯಲ್ಲಿ ಆಯೋಜಿಸಲಾಯಿತು
ಕಾರ್ಯಕ್ರಮದಲ್ಲಿ ಅಲ್ ಅಮೀನ್ ಉಪಾಧ್ಯಕ್ಷ ಅಬ್ದುಲ್ಲ ಜಿ ಎಂ ಅಧ್ಯಕ್ಷತೆ ವಹಿಸಿ, ಬದ್ರಿಯಾ ಜುಮಾ ಮಸೀದಿ ಗೂನಡ್ಕ ಖತೀಬ್ ಅಶ್ರಫ್ ಸಖಾಫಿ ಅಲ್ ಮಳ್ಹರಿ ಉದ್ಘಾಟಿಸಿ ಅಲ್ ಅಮೀನ್ ಸಾರ್ವಜನಿಕ ಸೇವೆ ಶ್ಲಾಘನೀಯವೆಂದು,ಉದ್ದೇಶ ಶುದ್ಧಿಯೊಂದಿಗಿನ ಸೇವೆಗೆ ಪ್ರತಿಫಲ ಖಂಡಿತ ವೆಂದರು.

ಜಮಾಅತ್ ಅಧ್ಯಕ್ಷ ಮುಹಮ್ಮದ್ ಕುಂಞಿ ಗೂನಡ್ಕ ಸಂದೇಶ ಭಾಷಣ ಗೈದರು.ಈ ಸಂದರ್ಭದಲ್ಲಿ ಅಲ್ ಅಮೀನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಟಿ ಬಿ, ಜಮಾಅತ್ ಮಾಜಿ ಅಧ್ಯಕ್ಷ ಹಾಜಿ ಉಮ್ಮರ್ ಪಿ ಎ, ಮಾಜಿ ಅಧ್ಯಕ್ಷ ಎಂ ಬಿ ಇಬ್ರಾಹಿಂ,ಮುಅಲ್ಲಿಂ ಹಾರಿಸ್ ಸಅದಿ,ಬಿ ಎಲ್ ಎ 2 ವಸಂತ ಪೆಲ್ತಡ್ಕ, ಬಾಲಚಂದ್ರ ನರಂದಗುಳಿ, ಅಶ್ರಫ್ ಪ್ರಗತಿ, ಸಂಪಾಜೆ ಸೊಸೈಟಿ ನಿರ್ದೇಶಕಿ ಪ್ರಮೀಳ ಪೆಲ್ತಡ್ಕ,ಸಾಜಿದ್ ಐ ಜಿ, ಜಮಾಅತ್ ಉಪಾಧ್ಯಕ್ಷ ಉಮ್ಮರ್ ಪುತ್ರಿ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಏ ಟಿ, ಕೋಶಾಧಿಕಾರಿ ಡಿ ಆರ್ ಖಾದರ್,ಅಲ್ ಅಮೀನ್ ನಿಕಟ ಪೂರ್ವಾಧ್ಯಕ್ಷ ಸಾದಿಕ್ ಕುಂಭಕ್ಕೋಡು, ಕೋಶಾಧಿಕಾರಿ ಜಾಬಿರ್ ಎಂ ಬಿ, ಕಾರ್ಯದರ್ಶಿ ಮಿರ್ಶಾದ್,ಸದಸ್ಯರುಗಳಾದ ಮುಹಮ್ಮದ್ ಪೆಲ್ತಡ್ಕ, ಡಿ ಎಂ ಅಬ್ದುಲ್ಲ ಪೆಲ್ತಡ್ಕ,ಹಸೈನ್ ಏ ಟಿ ದೊಡ್ಡಡ್ಕ ಉಪಸ್ಥಿತರಿದ್ದು ಸಹಕರಿಸಿದರು ಸಂಪಾಜೆ ಗ್ರಾಮ ವ್ಯಾಪ್ತಿಯ ನೂರಾರು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡರು.ಸದಸ್ಯ ಅಬೂಬಕ್ಕರ್ ಸಿದ್ದೀಕ್ ಸ್ವಾಗತಿಸಿ, ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ವಂದಿಸಿದರು





m
