Featured, ಇತರೆ, ಸ್ಥಳೀಯ

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ SIR-2026 ಪ್ರಗತಿ: 98.92% ಮತದಾರರಿಗೆ ಎನ್ಯೂಮರೇಷನ್ ಫಾರ್ಮ್ ವಿತರಣೆ

ಸುಳ್ಯ, ಜು.12: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲೆಯ 207-ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ-2026 (Special Intensive Revision-2026 – SIR) ಕಾರ್ಯವು ವೇಗವಾಗಿ ಸಾಗುತ್ತಿದೆ.

ಜುಲೈ 12ರಂದು ಅಪರಾಹ್ನ 4.00 ಗಂಟೆಯವರೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ Enumeration Form ವಿತರಣೆ ಹಾಗೂ ಮಾಹಿತಿಯ ಡಿಜಿಟೈಸೇಷನ್ ಕಾರ್ಯ ನಡೆಸಿದ್ದು, ಗಮನಾರ್ಹ ಪ್ರಗತಿ ಸಾಧಿಸಲಾಗಿದೆ.
207-ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,08,487 ಮತದಾರರಿದ್ದು, ಅವರಲ್ಲಿ 2,06,228 (98.92%) ಮತದಾರರಿಗೆ ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದೆ. ಇದುವರೆಗೆ 24,665 (11.88%) ಎನ್ಯೂಮರೇಷನ್ ಫಾರ್ಮ್‌ಗಳ ಮಾಹಿತಿಯನ್ನು ಡಿಜಿಟೈಸೇಷನ್ ಮಾಡಲಾಗಿದೆ.
ಇದಲ್ಲದೆ, 184 (0.09%) ಮತದಾರರನ್ನು ASDD (Absent, Shifted, Dead, Duplicate) ಎಂದು ಗುರುತಿಸಲಾಗಿದೆ. 1 (0.00%) ಮತದಾರರು ಪತ್ತೆಯಾಗದವರು (Untraceable/Absent) ಎಂದು ದಾಖಲಾಗಿದ್ದು, 85 (0.04%) ಮಂದಿ ಶಾಶ್ವತವಾಗಿ ವಲಸೆ ಹೋಗಿರುವವರು, 73 (0.04%) ಮಂದಿ ಮರಣ ಹೊಂದಿರುವವರು ಹಾಗೂ 25 (0.01%) ಮಂದಿ ದ್ವಿಪ್ರತಿ (Already Enrolled) ಮತದಾರರು ಎಂದು ಗುರುತಿಸಲಾಗಿದೆ. ಇತರೆ (Others) ವಿಭಾಗದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಮನೆ-ಮನೆ ಭೇಟಿ ಕಾರ್ಯ ಹಾಗೂ ಡಿಜಿಟೈಸೇಷನ್ ಪ್ರಕ್ರಿಯೆ ಮುಂದುವರಿದಿದ್ದು, ಮತದಾರರು ಸಹಕರಿಸುವಂತೆ ಚುನಾವಣಾ ಅಧಿಕಾರಿಗಳು ಮನವಿ ಮಾಡಿದ್ದಾರೆ.
m

Related Posts