ಬಿ.ಸಿ.ರೋಡ್ ಯುವತಿ ಹತ್ಯೆ ಪ್ರಕರಣ: ಆರೋಪಿಗೆ ಗರಿಷ್ಠ ಶಿಕ್ಷೆಯಾಗಲಿ – ಸುಳ್ಯ AIKMCC ಆಗ್ರಹ
ಸುಳ್ಯ, ಜು. 17: ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿ ಅಮಾಯಕ ಯುವತಿಯನ್ನು ಹಾಡುಹಗಲೇ ಮಾರಕವಾಗಿ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಅತ್ಯಂತ ಖೇದಕರ ಹಾಗೂ ಖಂಡನೀಯ ಎಂದು ಸುಳ್ಯ AIKMCC ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಮುಂದೆ ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ, ಪ್ರಕರಣದ ಆರೋಪಿಗೆ ಕಾನೂನಿನಡಿಯಲ್ಲಿ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ವಿಧಿಸುವಂತೆ ಸುಳ್ಯ AIKMCC ಒತ್ತಾಯಿಸಿದೆ.
ಇದೇ ವೇಳೆ, ಆರೋಪಿಯು ಯಾವ ಕಾರಣಕ್ಕಾಗಿ ಅಮಾಯಕ ಯುವತಿಯ ಹತ್ಯೆ ನಡೆಸಿದ್ದಾನೆ ಹಾಗೂ ಆತ ಮಾದಕ ವಸ್ತುಗಳ ಬಳಕೆದಾರನಾಗಿದ್ದಾನೆಯೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಿ, ನೈಜ ಮಾಹಿತಿಯನ್ನು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ತಿಳಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಈ ಘಟನೆ ದುಡಿದು ಜೀವನ ಸಾಗಿಸುವ ಯುವತಿಯರು ಹಾಗೂ ಮಹಿಳೆಯರಲ್ಲಿ ಆತಂಕ ಮತ್ತು ಭಯದ ವಾತಾವರಣವನ್ನು ಸೃಷ್ಟಿಸಿದ್ದು, ಮಹಿಳೆಯರ ಸುರಕ್ಷತೆಗೆ ಪೊಲೀಸ್ ಇಲಾಖೆ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸುಳ್ಯ AIKMCC ಅಧ್ಯಕ್ಷ ಖಲಂದರ್ ಎಲಿಮಲೆ ಹಾಗೂ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.





m
