Featured, ಇತರೆ

ಬೆಳ್ಳಾರೆ ಝಕರಿಯಾ ಜುಮ್ಮಾ ಮಸೀದಿ ಉರೂಸ್ ಸಮಿತಿ ರಚನೆ: ಮಮ್ಮಾಲಿ ಹಾಜಿ ಅಧ್ಯಕ್ಷ, ಬಶೀರ್ ಯು.ಪಿ. ಪ್ರಧಾನ ಕಾರ್ಯದರ್ಶಿ

 ಆಧ್ಯಾತ್ಮಿಕ ಪರಂಪರೆಯಲ್ಲಿ ಮಹತ್ವ ಪಡೆದಿರುವ ಉರೂಸ್ ಆಚರಣೆಯು ಪ್ರಾರ್ಥನೆ, ಧಾರ್ಮಿಕ ಚಿಂತನೆ, ಪರಸ್ಪರ ಪ್ರೀತಿ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ನೆನಪಿಸುವ ಸಂದರ್ಭವಾಗಿದೆ. 

ಬೆಳ್ಳಾರೆ: ಧಾರ್ಮಿಕ ಶ್ರದ್ಧೆ, ಆಧ್ಯಾತ್ಮಿಕ ಚೈತನ್ಯ ಹಾಗೂ ಸೌಹಾರ್ದತೆಯ ಸಂದೇಶವನ್ನು ಸಾರುವ ಉರೂಸ್ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸುವ ಉದ್ದೇಶದಿಂದ ಬೆಳ್ಳಾರೆ ಝಕರಿಯಾ ಜುಮ್ಮಾ ಮಸೀದಿಯ ಉರೂಸ್ ಸಮಿತಿಯನ್ನು ರಚಿಸಲಾಯಿತು. ಸಮಿತಿ ರಚನಾ ಸಭೆಯು ಅಬೂಬಕ್ಕರ್ ಹಾಜಿ ಮಂಗಳ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಮಹಲ್ ಖತೀಬರಾದ ನಸೀಹ್ ದಾರಿಮಿ ಅವರ ದುಆದೊಂದಿಗೆ ಸಭೆಗೆ ಚಾಲನೆ ನೀಡಲಾಯಿತು.

ನೂತನ ಪದಾಧಿಕಾರಿಗಳ ಆಯ್ಕೆ:

ಉರೂಸ್ ಸಮಿತಿಯ ಗೌರವಾಧ್ಯಕ್ಷರಾಗಿ ಅಬ್ದುಲ್ ಕಾದರ್ ಹಾಜಿ ಬಯಂಬಾಡಿ, ಅಧ್ಯಕ್ಷರಾಗಿ ಮಮ್ಮಾಲಿ ಹಾಜಿ ಅವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಮಹಮ್ಮದ್ ಬಿಸ್ಮಿಲ್ಲಾ, ಕರಾವಳಿ ಮಹಮ್ಮದ್, ಅತಾವುಲ್ಲಾ, ಕಲಂದರ್ ಹಾಜಿ ಹಾಗೂ ಆಸೀರ್ ಎ.ಬಿ. ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಯು.ಪಿ., ಜೊತೆ ಕಾರ್ಯದರ್ಶಿಗಳಾಗಿ ಶಾಫಿ ಟಿ., ಕಲೀಲ್ ಬಿಸ್ಮಿಲ್ಲಾ, ಯಹ್ಯಾ ಬೆಳ್ಳಾರೆ, ಆಶಿಕ್ ಮಂಗಳ, ಅನ್ಸಾಫ್, ಸೈಪುದ್ದೀನ್ ನೆಟ್ಟಾರ್ ಹಾಗೂ ಬಾತಿಷಾ ಕಲ್ಲೋಣಿ ಅವರನ್ನು ಆಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ಝಕರಿಯಾ ನಿಡ್ಮಾರ್ ಆಯ್ಕೆಯಾದರು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಯೂಸುಪ್ ಮುಸ್ಲಿಯಾರ್, ಹೈದರ್ ಕಳಂಜ, ಹಸನ್ ಸಖಾಫಿ, ಹಸನ್ ಇಂದ್ರಾಜೆ, ನಝೀರ್ ರಿಫಾಯಿ, ನವಾಝ್ ಬಿ.ಎ., ಶಾಫಿ ಸ್ಕೈ, ಉಮ್ಮರ್ ಪೆರುವಾಜೆ, ಇಬ್ರಾಹಿಂ ಉಸ್ತಾದ್, ಅದ್ದು ಉಮಿಕ್ಕಳ, ಅಶ್ರಫ್ ನೇಲ್ಯಮಜಲ್, ರಫೀಕ್ ಸಾಹೇಬ್ ದರ್ಖಾಸ್, ಹಾರಿಸ್ ಬೆಳ್ಳಾರೆ, ಕರೀಂ ಬೆಳ್ಳಾರೆ, ರಹೀಂ ನೆಟ್ಟಾರ್, ಹಮೀದ್ ಮಣಿಮಜಲ್, ಅದ್ದು ಬಯಂಬಾಡಿ, ಅಬ್ದುಲ್ ರಹಿಮಾನ್ ಕುಕ್ಕುಮೂಲೆ, ಕದೀರ್ ಬಿಸ್ಮಿಲ್ಲಾ ಹಾಗೂ ಅಲ್ತಾಫ್ ಬೆಳ್ಳಾರೆ ಆಯ್ಕೆಯಾದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಯೂಸುಪ್ ಮುಸ್ಲಿಯಾರ್, ಹೈದರ್ ಕಳಂಜ, ಹಸನ್ ಸಖಾಫಿ, ಹಸನ್ ಇಂದ್ರಾಜೆ, ನಝೀರ್ ರಿಫಾಯಿ, ನವಾಝ್ ಬಿ.ಎ., ಶಾಫಿ ಸ್ಕೈ, ಉಮ್ಮರ್ ಪೆರುವಾಜೆ, ಇಬ್ರಾಹಿಂ ಉಸ್ತಾದ್, ಅದ್ದು ಉಮಿಕ್ಕಳ, ಅಶ್ರಫ್ ನೇಲ್ಯಮಜಲ್, ರಫೀಕ್ ಸಾಹೇಬ್ ದರ್ಖಾಸ್, ಹಾರಿಸ್ ಬೆಳ್ಳಾರೆ, ಕರೀಂ ಬೆಳ್ಳಾರೆ, ರಹೀಂ ನೆಟ್ಟಾರ್, ಹಮೀದ್ ಮಣಿಮಜಲ್, ಅದ್ದು ಬಯಂಬಾಡಿ, ಅಬ್ದುಲ್ ರಹಿಮಾನ್ ಕುಕ್ಕುಮೂಲೆ, ಕದೀರ್ ಬಿಸ್ಮಿಲ್ಲಾ ಹಾಗೂ ಅಲ್ತಾಫ್ ಬೆಳ್ಳಾರೆ ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಇಸ್ಹಾಕ್ ಹಾಜಿ ಪಾಜಪಲ್ಲ, ನಸೀಹ್ ದಾರಿಮಿ, ಮುಹಮ್ಮದ್ ನವವಿ ಮುಂಡೋಲೆ, ಅಬೂಬಕ್ಕರ್ ಉಸ್ತಾದ್ ಹಾಗೂ ಹಸನ್ ಆರ್ಶದಿ ಬೆಳ್ಳಾರೆ ಅವರನ್ನು ಆಯ್ಕೆ ಮಾಡಲಾಯಿತು. ಗೌರವ ನಿರ್ದೇಶಕರಾಗಿ ಯು.ಎಚ್. ಅಬೂಬಕ್ಕರ್ ಅವರನ್ನು ನೇಮಿಸಲಾಯಿತು.

ಸಲಹಾ ಮಂಡಳಿ ರಚನೆ:

ಸಲಹಾ ಮಂಡಳಿಯ ಸದಸ್ಯರಾಗಿ ನಾಸಿರ್ ಬಿಝ್, ಹಮೀದ್ ಆಲ್ಫ, ಬಶೀರ್ ಕಲ್ಲಪಣೆ, ಉಸ್ಮಾನ್ ಹಾಜಿ, ಹಮೀದ್ ಎಚ್.ಎಂ., ಅಬ್ಬಚ್ಚ ಪೆರುವಾಜೆ, ಬಶೀರ್ ಕೆ.ಎ., ಅಝರುದ್ದೀನ್, ಹನೀಫ್ ನೆಟ್ಟಾರ್, ಮಹಮೂದ್ ಬಿ.ಎ., ಸಿದ್ದೀಕ್ ಮಾಲಂಗೇರಿ, ಜಲೀಲ್ ತಡಗಜೆ ಹಾಗೂ ಅಬ್ದುಲ್ ರಹಿಮಾನ್ ಟಿ. ಅವರನ್ನು ಆಯ್ಕೆ ಮಾಡಲಾಯಿತು.

ಆಧ್ಯಾತ್ಮಿಕ ಪರಂಪರೆಯ ಸಂಭ್ರಮಕ್ಕೆ ಸಿದ್ಧತೆ:

ಇಸ್ಲಾಮಿನ ಆಧ್ಯಾತ್ಮಿಕ ಪರಂಪರೆಯಲ್ಲಿ ಮಹತ್ವ ಪಡೆದಿರುವ ಉರೂಸ್ ಆಚರಣೆಯು ಪ್ರಾರ್ಥನೆ, ಧಾರ್ಮಿಕ ಚಿಂತನೆ, ಪರಸ್ಪರ ಪ್ರೀತಿ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ನೆನಪಿಸುವ ಸಂದರ್ಭವಾಗಿದೆ. ಇಂತಹ ಪವಿತ್ರ ಕಾರ್ಯಕ್ರಮವನ್ನು ಧಾರ್ಮಿಕ ಶಿಸ್ತು, ಶ್ರದ್ಧಾಭಕ್ತಿ ಹಾಗೂ ಸಮುದಾಯದ ಸಹಕಾರದೊಂದಿಗೆ ನಡೆಸುವ ಆಶಯದೊಂದಿಗೆ ನೂತನ ಸಮಿತಿಯನ್ನು ರಚಿಸಲಾಗಿದೆ.

ಸಭೆಯಲ್ಲಿ ಜಮಾಅತ್ ಕಾರ್ಯದರ್ಶಿ ನಾಸಿರ್ ಬಿಝ್ ಸ್ವಾಗತಿಸಿದರು. ನೂತನ ಉರೂಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಶೀರ್ ಯು.ಪಿ. ವಂದಿಸಿದರು.

Related Posts