ಗೌರವ ಅಧ್ಯಕ್ಷರಾಗಿ ಅಬುಲ್ ಬುಶ್ರಾ ಸಂಪ್ಯ ಉಸ್ತಾದ್, ಅಧ್ಯಕ್ಷರಾಗಿ ಕಲಂದರ್ ಬನ್ನೂರು, ಪ್ರ.ಕಾರ್ಯದರ್ಶಿಯಾಗಿ ಸಿರಾಜ್ ಅಕ್ಕರೆ ಆಯ್ಕೆ
ಪುತ್ತೂರು: ಬದ್ರಿಯಾ ಜುಮಾ ಮಸ್ಜಿದ್ ಬನ್ನೂರು ಇದರ ವಾರ್ಷಿಕ ಮಹಾಸಭೆಯು ಖತೀಬರಾದ ಸಿರಾಜುದ್ದೀನ್ ಸಖಾಫಿ ಉಸ್ತಾದರ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು. ಇಸ್ಮಾಯಿಲ್ ಹಾಜಿ ಬನ್ನೂರು ರವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯನ್ನು ಅಬುಲ್ ಬುಶ್ರಾ ಸಂಪ್ಯ ಉಸ್ತಾದರು ದುಆದೊಂದಿಗೆ ಚಾಲನೆಗೊಳಿಸಿದರು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಬಿಜೆಎಂ ಬನ್ನೂರು ಮುದರ್ರಿಸ್ ಹಾಗೂ ಖತೀಬರಾದ ಕನ್ಯಾನ ಸಿರಾಜುದ್ದೀನ್ ಸಖಾಫಿ ಉಸ್ತಾದರು ಮಸ್ಜಿದ್ ನ ಪಾವಿತ್ರ್ಯತೆ ಹಾಗೂ ಮಹಲ್ಲು ಕಮಿಟಿಯ ಜವಾಬ್ದಾರಿತನದ ಬಗ್ಗೆ ಸವಿವರಣೆ ನೀಡಿದರು. ನಂತರ ಪ್ರ.ಕಾರ್ಯದರ್ಶಿ ಅಶ್ರಫ್ ಹಾರಾಡಿ ವಾರ್ಷಿಕ ವರದಿ ವಾಚಿಸಿ ಕೋಶಾಧಿಕಾರಿ ಮಜೀದ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಬಳಿಕ ಉಸ್ತಾದರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.

ನೂತನ ಪದಾಧಿಕಾರಿಗಳು:- ಅಬುಲ್ ಬುಶ್ರಾ ಅಬ್ದುರ್ರಹ್ಮಾನ್ ಫೈಝಿ ಸಂಪ್ಯ (ಗೌರವ ಅಧ್ಯಕ್ಷರು), ಕಲಂದರ್ (ಅಧ್ಯಕ್ಷರು), ಹನೀಫ್ (ಉಪಾಧ್ಯಕ್ಷರು), ಇಬ್ರಾಹಿಂ ಸುಪಾರಿ (ಉಪಾಧ್ಯಕ್ಷರು), ಸಿರಾಜ್ (ಪ್ರ.ಕಾರ್ಯದರ್ಶಿ), ಅಶ್ರಫ್ (ಕಾರ್ಯದರ್ಶಿ), ರಹೀಮ್ (ಕಾರ್ಯದರ್ಶಿ), ಫಯಾಝ್ (ಕೋಶಾಧಿಕಾರಿ), ಹಾಗೂ ಸದಸ್ಯರಾಗಿ ಸೈಫುಲ್ಲಾಹ್ ಸಅದಿ, ಪವಾಝ್ ಪಾಪ್ಲಿ, ಇಫಾಝ್ (ಸದಸ್ಯರುಗಳು)
ವರದಿ: ಬಿಕೆಎಸ್ಎ ಸಂಪ್ಯ





m
