ಸುಳ್ಯ: ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಕಮಿಟಿ (ರಿ) ಜಟ್ಟಿಪಳ್ಳ ಇದರ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡ ಬರುತ್ತಿರುವ ವಾರ್ಷಿಕ ಜಲಾಲಿಯ್ಯ ರಾತೀಬ್ ದುಆಃ ಮಜ್ಜಿಸ್ ಕಾರ್ಯಕ್ರಮ ಇಂದು 1 ಫೆಬ್ರವರಿ 2025 ಸೋಮವಾರ ಮಗ್ರಿಬ್ ನಮಾಝ್ ನಂತರ ಜರುಗಲಿದೆ ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯದ್ ಕುಂಞಕೋಯ ತಂಙಳ್ ಸಹದಿ ನೆರವೇರಿಸಲಿದ್ದಾರೆ ಜಲಾಲಿಯ್ಯ ರಾತೀಬ್ ದುಆಃ ಮಜ್ಜಿಸ್ ಗೆ ಅಸ್ಸೆಯ್ಯದ್ ಜಅಫರ್ ಸ್ವಾದಿಕ್ ತಂಙಳ್ ಕುಂಬೋಲ್ ಇವರ ನೇತೃತ್ವದಲ್ಲಿ ನಡೆಯಲಿದೆ ಲತೀಫ್ ಸಖಾಫಿ ಗೂನಡ್ಕ, ಸಿರಾಜ್ ಸಅದಿ ಅಲೆಕ್ಕಾಡಿ ಉಪಸ್ಥಿತರಿರಲಿದ್ದಾರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಶೀರ್ ಬಾಳಮಕ್ಕಿ ವಹಿಸಲಿದ್ದಾರೆ ಅಲ್ಲದೆ ಹಲವಾರು ಉಲಾಮ ಉಮಾರ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಇವಾರ್ತೆಗೆ ತಿಳಿಸಿದ್ದಾರೆ

ಮನುಷ್ಯ ಮನಸ್ಸು ಗಳಿಗೆ ಮನಃ ಶಾಂತಿ ನೀಡುವ. ಆದ್ಯಾತ್ಮಕ ಸಂಗಮ
ಪ್ರತಿಷ್ಠಿತ ಕುಂಬೋಲ್ ತಂಙಳ್ ಕುಟುಂಬದ ಜಅಫರ್ ಸ್ವಾದಿಕ್ ತಂಙಳ್ ಕುಂಬೋಲ್ ರವರು ಜಟ್ಟಿಪಳ್ಳ ಮಸೀದಿಯಲ್ಲಿ ಸ್ಥಾಪಿಸಿದ ಜಲಾಲಿಯ್ಯಾ ದ್ಸಿಕೃ ದುಆಃ ಮಜ್ಲಿಸ್ ಇದೀಗ ಜನಮನ್ನಣೆಗೊಂಡಿರುತ್ತದೆ ಪ್ರತೀ ತಿಂಗಳ ಎರಡನೇ ಶುಕ್ರವಾರ ರಾತ್ರಿ ನಡೆಯುವ ಪ್ರಸ್ತುತ ಆಧ್ಯಾತ್ಮಿಕ ಸಂಗಮದಲ್ಲಿ ಆಸುಪಾಸಿನ ನೂರಾರು ಭಕ್ತ ಜನರು ಭಾಗವಹಿಸುತ್ತಾರೆ ಅನೇಕಾನೇಕ ಕಷ್ಟ ದುಖಃಗಳು,ರೋಗ ರುಜಿನಗಳು,ನೂರಾರು ಸಮಸ್ಯೆಗಳು,ಈಡೇರಬೇಕಾದ ಅಸಂಖ್ಯ ಸದುದ್ದೇಶಗಳು ಇವುಗಳ ಮಧ್ಯೆ ಜನ ಸಾಮಾನ್ಯರಿಗೆ ಮನಃ ಶಾಂತಿ ನೀಡುವ ಉತ್ತಮ ಸುವರ್ಣಾವಕಾಶವಾಗಿದೆ ಜಲಾಲಿಯ್ಯಾ ಸಂಗಮ.ಈಗಾಗಲೇ ಬಹಳಷ್ಟು ಮಂದಿಯ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರವಾಗಿದ್ದು,ಸದುದ್ದೇಶಗಳು ಈಡೇರಿಕೊಂಡು ಸಂತೃಪ್ತಿಗೊಂಡಿರುತ್ತಾರೆ.
ತಾಲೂಕಿನ ಅಪೂರ್ವವಾದ ಪ್ರಸ್ತುತ ಆದ್ಯಾತ್ಮಕ ಸಂಗಮದ ಸಂದೇಶ ಇನ್ನಷ್ಟು ಜನರಿಗೆ ತಲುಪಬೇಕಾಗಿದೆ ಈ ನಿಟ್ಟಿನಲ್ಲಿ ವಾರ್ಷಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜನ ಸಾಮಾನ್ಯರು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಲು ಸಂಘಟಕರು ವಿನಂತಿಸಿಕೊಂಡಿದ್ದಾರೆ





m

