Featured, ಇತರೆ, ರಾಜಕೀಯ, ಸ್ಥಳೀಯ

ಸುಳ್ಯ ವಿಧಾನ ಸಭಾ ಕ್ಷೇತ್ರದ ಸಂಪಾಜೆ ವಲಯದ ಕಾಂಗ್ರೆಸ್ ಕಾರ್ಯಾಕಾರಿ ಸಮಿತಿಯ ನೇತ್ರತ್ವದಲ್ಲಿ ವಾರ್ಡಿನ ವಿಭಾಗವಾರು ಸಭೆ

ಫೆಬ್ರವರಿ 16 ರಂದು ನಡೆಯಲಿರುವ ಸಂಪಾಜೆ ವಲಯ ಕಾಂಗ್ರೆಸ್ ಸಮಾವೇಶದ ಪೂರ್ವಭಾವಿಯಾಗಿ ಪ್ರತೀ ವಾರ್ಡು ಸಮಿತಿಗಳ ಸಭೆ ನಡೆಯಬೇಕೆನ್ನುವ ತೀರ್ಮಾನದಂತೆ 09-02-2025 ನೆ ಆದಿತ್ಯವಾರ ಸಂಪಾಜೆ ವಲಯ ಕಾಂಗ್ರೆಸ್‌ನ ಗೂನಡ್ಕ–ದರ್ಖಾಸ್ತುವಿನ ವಾರ್ಡ್ ಕಾಂಗ್ರೆಸ್ ಸಮಿತಿಯ ಸಭೆಯು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಂಪಾಜೆ ವಲಯ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಪ್ರಧಾನ ಕಾರ್ಯದರ್ಶಿಗಳಾದ ಪಿ.ಕೆ.ಅಬೂಸಾಲಿರವರ ಮನೆಯಲ್ಲಿ ಜರುಗಿತು.

ಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಪಕ್ಷ ಸಂಘಟನೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪಾಜೆ ವಲಯ ಕಾಂಗ್ರೆಸ್ ವರ್ಕಿಂಕ್ ಕಮಿಟಿಯ ಅಧ್ಯಕ್ಷರಾದ ಕೆ.ಪಿ.ಜಾನಿ ಅವರು ಫೆಬ್ರವರಿ 16 ರಂದು ಕಲ್ಲುಗುಂಡಿಯಲ್ಲಿ ಜರುಗಲಿರುವ ಕಾಂಗ್ರೆಸ್ ಸಮಾವೇಶದ ಪೂರ್ವಭಾವಿ ಸಿದ್ದತೆ ಹಾಗೂ ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ಮಾತನಾಡಿದರು. ಈ ವೇಳೆ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸೋಮಶೇಖರ್ ಕೊಯಿಂಗಾಜೆ, ಮಹಮ್ಮದ್ ಕುಂಞಿ ಗೂನಡ್ಕ, ಕೆ.ಪಿ.ಜಾನಿ, ಕೆ.ಆರ್.ಜಗದೀಶ್ ರೈ, ಪಿ.ಕೆ.ಅಬೂಸಾಲಿ, ಬಿ.ಎಸ್.ಯಮುನಾ, ಪ್ರಮೀಳಾ ಪೆಲ್ತಡ್ಕ, ಉಷಾ ರಾಮ ನಾಯ್ಕ್ ಅವರನ್ನು ಹಾಗೂ ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾದ ಚೇತನ್ ಕಜೆಗದ್ದೆ, ರಾಷ್ಟ್ರೀಯ ಪ್ರೇರಣಾ ದೂತ್ ಅವಾರ್ಡ್ ಪುರಸ್ಕ್ರತರಾದ ದ.ಕ.ಜಿಲ್ಲಾ NSUI ಸಮಿತಿಯ ಕಾರ್ಯದರ್ಶಿ ಉಬೈಸ್ ಗೂನಡ್ಕ, ತಾಲೂಕು ಗ್ಯಾರಂಟಿ ಸಮಿತಿ ಸದಸ್ಯರಾಗಿ ನೇಮಕಗೊಂಡ ಬಿ.ಎಸ್.ಕಾಂತಿ ಅವರನ್ನು ಗೂನಡ್ಕ–ದರ್ಖಾಸ್ತು ವಾರ್ಡ್ ಕಾಂಗ್ರೆಸ್ ಸಮಿತಿಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಕೆ.ಗೋಕುಲ್ ದಾಸ್, ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಚೇತನ್ ಕಜೆಗದ್ದೆ, ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯರಾದ ಭವಾನಿಶಂಕರ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಂಪಾಜೆ ವಲಯ ಕಾಂಗ್ರೆಸ್ ಉಪಾಧ್ಯಕ್ಷರಾದ ಎ.ಕೆ.ಇಬ್ರಾಹಿಂ, ಸಂಪಾಜೆ ವಲಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಕೆ.ಎಂ.ಅಶ್ರಫ್, ಸಂಪಾಜೆ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಐ.ಲೂಕಾಸ್, ತಾಜ್ ಮಹಮ್ಮದ್ ಸಂಪಾಜೆ, ವಸಂತ ಗೌಡ ಪೆಲ್ತಡ್ಕ, ಸೆಬಾಸ್ಟಿಯನ್ ನೆಲ್ಲಿಕುಮೇರಿ, ಲಲನ ಸಂಪಾಜೆ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ಸಂಪಾಜೆ ವಲಯ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ಅಬೂಸಾಲಿರವರು ಸ್ವಾಗತಿಸಿ, ಕೆ.ಪಿ.ಸಿ.ಸಿ.ವಕ್ತಾರರಾದ ಶೌವಾದ್ ಗೂನಡ್ಕರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಈ ಸಭೆಯಲ್ಲಿ ಹಾಜರಿದ್ದರು.

m

Related Posts