Featured, ಇತರೆ, ಸ್ಥಳೀಯ

ಜಟ್ಟಿಪಳ್ಳ ಮದರಸ ಕ್ಲೋಸಿಂಗ್ ಸೆರೆಮನಿ: ವಿದ್ಯಾರ್ಥಿಗಳಿಗೆ ವಿದಾಯ ಮತ್ತು ಅಭಿನಂದನಾ ಕಾರ್ಯಕ್ರಮ

ಸುಳ್ಯ ಜಟ್ಟಿಪಳ್ಳ :ಹಯಾತುಲ್ ಇಸ್ಲಾಂ ಕಮಿಟಿ ರಿ. ಜಟ್ಟಿಪಳ್ಳ ಇದರ   ಅಧೀನ ಸಂಸ್ಥೆ  ಬುಸ್ತಾನುಲ್ ಉಲೂಂ ಮದರಸದಲ್ಲಿ ರಂಝಾನ್ ಪ್ರಯುಕ್ತ ಪ್ರಸಕ್ತ ಸಾಲಿನ ಮದರಸ ಕ್ಲೋಸಿಂಗ್ ಸೆರಮನಿ ಹಾಗೂ ಎಂಟನೇ ತರಗತಿ ಪೂರ್ತಿಗೊಳಿಸಿ ತೆರಳುವ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮವು ಹಯಾತುಲ್ ಇಸ್ಲಾಂ ಕಮಿಟಿಯ ನೂತನ ಅಧ್ಯಕ್ಷರಾದ ಹಾಜಿ ಮುಹಮ್ಮದ್ ಬಿ ಎಂ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮದರಸ ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ಈ ವರೆಗೆ ಕಲಿತ ಧಾರ್ಮಿಕ ವಿದ್ಯೆಗಳನ್ನು ಪ್ರಾಯೋಗಿಕವಾಗಿ ಬದುಕಲ್ಲಿ ಅಳವಡಿಸಿಕೊಂಡು ಸತ್ಪ್ರಜೆಗಳಾಗಿ ಬಾಳಲು ಬದ್ದರಾಗಬೇಕೆಂದು ಹಿತವಚನ ನೀಡಿದರು. ಮುಅಲ್ಲಿಂ ಸಿರಾಜ್ ಸಅದಿ ಅಲೆಕ್ಕಾಡಿ ಶುಭಹಾರೈಸಿದರು.

ಈ ಸಂಧಂರ್ಭ ಗೌರವಾಧ್ಯಕ್ಷ ಅಬೂಬಕ್ಕರ್ ಕೆ ಎ, ಉಪಾಧ್ಯಕ್ಷ ಹಾಜಿ ಅಬೂಬಕ್ಕರ್ ವಿ ಕೆ, ಪ್ರಧಾನ ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ, ಕೋಶಾಧಿಕಾರಿ ಎನ್ ಎ ಅಬ್ದುಲ್ಲ, ನಿಕಟ ಪೂರ್ವ ಅಧ್ಯಕ್ಷ ಬಶೀರ್ ಬಾಳಮಕ್ಕಿ, ಪ್ರಧಾನ ಕಾರ್ಯದರ್ಶಿ ಫೈಸಲ್, ಅನಿವಾಸಿ ಉದ್ಯಮಿ ರಶೀದ್ ವಿ ಕೆ, ಇಸ್ಮಾಯಿಲ್ (ಈಚು) ಅಶ್ರಫ್ ಕುಂದಾಪುರ, ಮುಹಮ್ಮದ್ ಎಸ್ ಎ ಉಪಸ್ಥಿತರಿದ್ದರು. ಇತ್ತಿಚ್ಚೆಗೆ ಅಗಲಿದ ಉತ್ತಮ ವಾಗ್ಮಿಗಳಾದ ಮಶ್ಹೂದ್ ಸಖಾಫಿ ಗೂಡಲ್ಲೂರ್ ಸಹಿತ ಅಗಲಿದವರನ್ನು ಅನುಸ್ಮರಿಸಿ ವಿಶೇಷ ದುಆಃ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಉಸ್ತಾದರು ಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಮದ್ರಸ ಉಸ್ತುವಾರಿ ರಶೀದ್ ಜಟ್ಟಿಪಳ್ಳ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಕಬೀರ್ ಜಟ್ಟಿಪಳ್ಳ ವಂದಿಸಿದರು

m

Related Posts