ಸುಳ್ಯ : ಸುಮಾರು 1984 -85 ರ ಇಸವಿಯಲ್ಲಿ ಸುಳ್ಯ ಗಾಂಧಿನಗರ ಪರಿಸರದಲ್ಲಿ ಒಂದೇ ಕಡೆ ಕಾರ್ಮಿಕ ರಾಗಿ ದುಡಿಯುತ್ತಿದ ಗೆಳೆಯರು ರಚಿಸಿದ ಒಕ್ಕೂಟ ಓಲ್ಡ್ ಫ್ರೆಂಡ್ಸ್ ವಾಟ್ಸ್ ಆಪ್ ಗ್ರೂಪ್. ಸುಮಾರು 22 ಜನರನ್ನು ಒಳಗೊಂಡ ಈ ಓಲ್ಡ್ ಫ್ರೆಂಡ್ಸ್ ವಾಟ್ಸ್ ಆಪ್ ಗ್ರೂಪ್ ಜೀವ ಕಾರುಣ್ಯ, ಸ್ನೇಹ ಕಾರುಣ್ಯ, ಸೇವೆಯನ್ನು ಮಾಡುತ್ತಾ ಬರುತ್ತಿದ್ದು ಸ್ನೇಹಿತರ ಒಳಗೆ ಬಾಂಧವ್ಯ ಸಂಪರ್ಕ ಹೆಚ್ಚಿಸಿದೆ

ಇದೀಗ ಮುಸಲ್ಮಾನ ಬಾಂಧವರ ಪವಿತ್ರ ರಂಜಾನ್ ತಿಂಗಳ ಉಪವಾಸದ ಪ್ರಯುಕ್ತ ಸುಳ್ಯ ಗಾಂಧಿನಗರ ಕೆಂದ್ರ ಜುಮಾ ಮಸೀದಿಯಲ್ಲಿ ಮಾಚ್೯ 3 ರಂದು ಬೃಹತ್ ಇಫ್ತಾರ್ ಕೂಟವನ್ನು ಓಲ್ಡ್ ಫ್ರೆಂಡ್ಸ್ ವಾಟ್ಸ್ ಆಪ್ ಗ್ರೂಪ್ ವತಿಯಿಂದ ಆಯೋಜಿಸಲಾಗಿತ್ತು

ಸುಮಾರು 600 ಕ್ಕೂ ಅಧಿಕ ಮಂದಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗಾಂಧಿನಗರ ಕೆಂದ್ರ ಜುಮಾ ಮಸೀದಿಯ ಖತೀಬ್ ರಾದ ಆಶ್ರಫ್ ಕಾಮೀಲ್ ಸಖಾಫಿ ದುವಾ: ನೆರವೇರಿಸಿದರು. ಓಲ್ಡ್ ಫ್ರೆಂಡ್ಸ್ ವಾಟ್ಸ್ ಆಪ್ ಗ್ರೂಪ್‌ನ ಸದಸ್ಯರಾದ ಮೊಹಿದ್ದೀನ್ ವೈಟ್. ಅಬೂಬ್ಬಕ್ಕರ್ ಪುಷ್ಪಕ್, ಮಹಮ್ಮದ್ ಕಾರ್ಲೆ, ಶುಕುರ್ ಹಾಜಿ,ಹಾರೀಸ್ ಎಸ್ ಎಚ್ ಮೊದಲಾದವರು ಉಪಸ್ಥಿತರಿದ್ದರು. ಹಮೀದ್ ಬೀಜ ಕೊಚ್ಚಿ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು

“ಪುಣ್ಯ ಸಾಕರದ ಮಹತ್ವದ ಇಫ್ತಾರ್„
ಮುಸಲ್ಮಾನರ ಪುಣ್ಯ ಪವಿತ್ರ ರಂಜಾನ್ ತಿಂಗಳು ಆಗಮನವಾಗಿದೆ ಈ ತಿಂಗಳಲ್ಲಿ ಮುಸಲ್ಮಾನರು ಅಧಿಕವಾಗಿ ಶ್ರದ್ಧಾ, ಭಕ್ತಿ, ಧ್ಯಾನಗಳ ಧಾರ್ಮಿಕತೆಯಲ್ಲಿ ತೊಡಗುತ್ತಾರೆ. ಇದರಲ್ಲಿ ಪ್ರಧಾನವಾಗಿ ಪ್ರಾತಃಕಾಲ ಕಾಲದಿಂದ ಹಿಡಿದು ದಿನದ ಸಂಧ್ಯಾ ಕಾಲದ ವರಗೆ ಏಕ ದೇವ ಸ್ಮರಣೆ ಯೊಂದಿಗೆ ಉಪವಾಸ ಆಚರಿಸಿ ಪುನೀತರಾಗುತ್ತಾರೆ. ಈಗೆ ಹಲವಾರು ಭಕ್ತರಿಗೆ ಸಂಜೆಯ ಉಪವಾಸ ತೊರೆಯುವ ಸಂದರ್ಭದಲ್ಲಿ ಲಘ ಉಪಹಾರದ ವ್ಯವಸ್ಥೆ ಮಾಡುವುದೇ ಪುಣ್ಯ ಸಾಕರಗೊಳ್ಳುವ ಮಹತ್ವದ ಇಫ್ತಾರ್ ಎಂದು ಕರೆಯಲಾಗುತ್ತದೆ.






m

