ಪಕ್ಷದ ಕ್ರಿಯಾಶೀಲ ನಾಯಕರಾದ ಕಂಠಿಯವರ ಮೇಲೆ ಮಹಿಳೆ ಮೇಲೆ ಹಲ್ಲೆ ಎಂಬ ಸುಳ್ಳು ಆರೋಪವನ್ನು ಹೊರಿಸಿ ದೂರು ಕೊಟ್ಟಿರುವುದು ಖಂಡನೀಯ . ನಗರ ಪಂಚಾಯತ್ ಸದಸ್ಯನಾಗಿ ಸಮಾಜದ ಎಲ್ಲರ ಜೊತೆ ಬೆರೆತು ಅಬಿವೃದ್ದಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಇವರ ಮೇಲೆ ಈ ರೀತಿಯ ಸುಳ್ಳು ಆರೋಪ ಮಾಡಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಇದರ ಹಿಂದಿರುವ ಸತ್ಯಾ ಸತ್ಯತೆಯನ್ನು ಬಯಲಿಗೆಳೆಯಬೇಕಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯತ ಘಟಕದ ಅದ್ಯಕ್ಷರಾದ ಇಸ್ಮಾಯಿಲ್ ಪಡ್ಪಿನಂಗಡಿ ಆಗ್ರಹಿಸಿದ್ದಾರೆ ಸುಳ್ಳು ಆರೋಪದ ಮೇಲೆ ಶರೀಫ್ ಇವರ ಮೇಲೆ ಪ್ರಕರಣ ದಾಖಲು ಮಾಡಿದ್ದು ಎಂದು ಸಾರ್ವಜನಿಕ ವಲಯದಲ್ಲಿ ವ್ಯಕ್ತ ವಾಗುತ್ತಿದೆ. ಪೂರ್ವ ದ್ವೇಷ ಇಟ್ಟು ಜನ ಪ್ರತಿನಿಧಿಗಳಿಗೆ ಷಡ್ಯಂತ್ರ ರೂಪಿಸಿ ಪ್ರಕರಣದಲ್ಲಿ ಸಿಲುಕಿಸಿ ಅತಂತ್ರತೆಯ ವಾತವರಣ ಸೃಷ್ಟಿಸಲು ಪ್ರಯತ್ನ ಪಡುವುದು ಕಾಣುತ್ತಿದೆ. ಈ ಪ್ರಕರಣದಲ್ಲಿ ಕಾಣದ ಕೈಗಳ ಕುತಂತ್ರ ಇದ್ದು ಇಲಾಖೆ ಪ್ರಕರಣವನ್ನು ಗಂಭೀರ ವಾಗಿ ತೆಗೆದು ಪ್ರಕರಣದ ಸತ್ಯಾಸತ್ಯತೆ ಬಯಲು ಮಾಡಬೇಕಾದ ಅನಿವಾರ್ಯತೆ ಇದೇ..




m

