Featured, ಇತರೆ, ಸ್ಥಳೀಯ

ಬಂದಡ್ಕ – ಮಾಣಿಮೂಲೆ ಯಲ್ಲಿ ಮಣ್ಣಿನ ಅಡಿಯಿಂದ ಪುರಾತನ ವಸ್ತು ಪತ್ತೆ

ಸುಳ್ಯ : ಕರ್ನಾಟಕ, ಕೇರಳ ಗಡಿ ಪ್ರದೇಶ, ಸುಳ್ಯ ದಿಂದ ಕೆಲವು ಕಿಲೋಮೀಟರ್ ದೂರವಿರುವ ಮಾಣಿಮೂಲೆ ಎಂಬಲ್ಲಿ ಮಣ್ಣಿನ ಅಡಿಯಿಂದ ಪುರಾತನ ವಸ್ತು ಪತ್ತೆಯಾಗಿದೆ. ಜಲಜೀವನ ಮಿಷನ್ ಯೋಜನೆಯಲ್ಲಿ ಮನೆಗಳಿಗೆ ಕುಡಿಯುವ ನೀರು ಸಂಪರ್ಕದ  ಪೈಪ್ ಅಳವಡಿಸಲು ರಸ್ತೆ ಬದಿಯಲ್ಲಿ ಮಣ್ಣು ಅಗೆಯುವಾಗ ಮಣ್ಣಿನ ಅಡಿಯಲ್ಲಿ ಈ ವಸ್ತುಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ.ವಿಭಿನ್ನ ಆಕಾರದ ಮತ್ತು ವಿವಿಧ ಗಾತ್ರಗಳ ಸುಮಾರು 15 ಮಣ್ಣಿನ ಮತ್ತು ಲೋಹದ ಪಾತ್ರೆಗಳು ಸಿಕ್ಕಿವೆ ಬೇಡಕಂ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು ಸ್ಥಳೀಯ ಕುತ್ತಿಕೋಲ್ ಪಂಚಾಯತ್ ಕಛೇರಿಗೆ ಮಾಹಿತಿ ನೀಡಿದ್ದಾರೆ ಎಂದು ಸ್ಥಳೀಯ ಮೂಲದಿಂದ ತಿಳಿದುಬಂದಿದೆ

m

Related Posts