ಇಸ್ಲಾಂ ಧರ್ಮದಲ್ಲಿ ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳು ನೀತಿ-ನಿಯಮಗಳಿಗೆ ಒಳಪಟ್ಟಿವೆ. ಇಸ್ಲಾಮಿಕ್ ವ್ಯಾಪಾರ ನೀತಿಯ ಮೂಲಭೂತ ತತ್ವಗಳು ಧಾರ್ಮಿಕ ನಂಬಿಕೆಗಳು, ನ್ಯಾಯ, ಸಾಮಾಜಿಕ ಜವಾಬ್ದಾರಿ, ಮತ್ತು ನೈತಿಕತೆಯನ್ನು ಆಧರಿಸಿವೆ : ಅಬ್ದುಲ್ ಹಕೀಂ ಅಲ್ ಅಝ್ಹ್ ರಿ
ಸುಳ್ಯ : ಉಧ್ಯಮಿ, ಸಾಮಾಜಿಕ ಧುರೀಣ, ಲತೀಫ್ ಹರ್ಲಡ್ಕ ಇವರ ವಿಲ್ಲಾ ದಲ್ಲಿ ಯುವ ಜನತೆ ಮತ್ತು ಸಬಲೀಕರಣ ಎಂಬ ವಿಷಯದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಸಂಪನ್ಮೂಲ ವ್ಯಕ್ತಿ DR.ಅಬ್ದುಲ್ ಹಕೀಂ ಅಲ್ ಅಝ್ಹ್ ರಿ ಉಸ್ತಾದ್ ರವರಿಂದ ಮಾಹಿತಿ ಕಾರ್ಯಾಗಾರ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.

ದೇಶದ ಆರ್ಥಿಕ, ಸಾಮಾಜಿಕ, ಮತ್ತು ತಾಂತ್ರಿಕ ಪ್ರಗತಿಯಲ್ಲಿ ಉದ್ಯಮಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಯುವ ಜನತೆ ಉಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ. ಯಶಸ್ವಿ ಉದ್ಯಮಿಯಾಗಲು ನಿಖರತೆ, ಪರಿಶ್ರಮ, ಮತ್ತು ನೈಪುಣ್ಯತೆಯನ್ನು ಅಭಿವೃದ್ಧಿಪಡಿಸಬೇಕು. ವಸ್ತು ಅಥವಾ ಸೇವೆಯನ್ನು ಪರಿಣಾಮಕಾರಿಯಾಗಿ ಮಾರಾಟ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳುವುದು ಅತ್ಯಗತ್ಯ. ಮುಸ್ಲಿಂ ಉದ್ಯಮಿಗಳು ಇಸ್ಲಾಮೀ ವ್ಯಾಪಾರ ನೀತಿಗಳನ್ನು (ಸತ್ಯನಿಷ್ಠೆ, ನ್ಯಾಯ, ಸಾಮಾಜಿಕ ಜವಾಬ್ದಾರಿ) ಅನುಸರಿಸಿ, ಮುನ್ನಡೆಯ ಬೇಕು ಆದರೆ ಮಾತ್ರ ಇಹಪರ ಲೋಕದಲ್ಲಿ ಯಶಸ್ಸನ್ನು ಸಾಧಿಸಬಹುದು. ಅಂತಿಮವಾಗಿ, ನೈತಿಕ ಮತ್ತು ಸೃಜನಶೀಲ ಆಲೋಚನೆಗಳು ಯಶಸ್ವಿ ಉದ್ಯಮದ ಕೀಲಿಕೈ ಎಂದು ಅವರು ಒತ್ತಿ ಹೇಳಿದರು. ಇದೇ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಸುಳ್ಯ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಇವರಿಗೆ ಹಕೀಂ ಉಸ್ತಾದ್ ರವರು ಶಾಲು ಹೊದಿಸಿ ಗೌರವಿಸಿದರು

ಮೊಗರ್ಪಣೆ ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್ ಖಾದರ್ ಸಖಾಫಿ ಮುದುಗಡ ದುವಾಶಿರ್ವಚನ ಮಾಡಿದರು. ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ಲಾ ಹಾಜಿ ಕಟ್ಟೆಕ್ಕಾರ್, ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್,ಹಿರಿಯ ಉದ್ಯಮಿ ಅಬೂಭಕ್ಕರ್ ಹಾಜಿ ಬಿಎಂಎ ಗ್ರೂಪ್, ನ್ಯಾಯವಾದಿ ಅಬೂಭಕ್ಕರ್ ಅಡ್ಕಾರ್,ಗಾಂಧಿನಗರ ಜಮಾಯತ್ ಕಮಿಟಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ,ಕೋಶಾಧಿಕಾರಿ ಹಮೀದ್ ಹಾಜಿ ಎಸ್ ಎಂ, ಬಾಬ ಹಾಜಿ ಎಲಿಮಲೆ, ಸುಳ್ಯ ತಾಲೂಕು ಸಂಯುಕ್ತ ಜಮಾಯತ್ ಅಧ್ಯಕ್ಷ ಮಹಮ್ಮದ್ ಕುಂಞ ಗೂನಡ್ಕ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲತೀಫ್ ಹರ್ಲಡ್ಕ ವಹಿಸಿದ್ದರು ಸುಳ್ಯ ಸೂಡ ಅಧ್ಯಕ್ಷರಾದ ಮುಸ್ತಫಾ ಕೆ ಮ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಅನ್ಸಾರಿಯಾ ಖತೀಬರಾದ ಹಾಫೀಳ್ ಹಾಮೀದ್ ಸಖಾಫಿ ಸ್ವಾಗತಿಸಿ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಯಶಸ್ವಿ ಉದ್ಯಮಕ್ಕೆ “ಎಲಿವೇಟ್ ಕೀ”… ಋಣಾತ್ಮಕದಿಂದ ಧನಾತ್ಮಕದತ್ತ : ಉಧ್ಯಮ ಮಾಹಿತಿ ಕಾರ್ಯಾಗಾರ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ | ಕರ್ನಾಟಕ, ಒಡಿಶಾದ ಪ್ರವಾಸಿಗರು ಸೇರಿದಂತೆ 25 ಜನರು ಸಾವು!!!
ಭಯೋತ್ಪಾದಕ ದಾಳಿ | ಸಿಎಂ ಸಿದ್ದರಾಮಯ್ಯ ತುರ್ತುಸಭೆ; ಕಾಶ್ಮೀರಕ್ಕೆ ತೆರಳಿದ ರಾಜ್ಯದ ಅಧಿಕಾರಿಗಳು
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗೆ 5 ಪ್ರವಾಸಿಗರು ಬಲಿ, ಹಲವರಿಗೆ ಗಾಯ;
ವಿವಾದಾತ್ಮಕ ‘ಸರ್ಬತ್ ಜಿಹಾದ್’ ವಿಡಿಯೋ ತೆಗೆದುಹಾಕುವಂತೆ ಬಾಬಾ ರಾಮ್ದೇವ್ಗೆ ಹೈಕೋರ್ಟ್ ಆದೇಶ;
ವಕ್ಫ್ ಪ್ರತಿಭಟನೆ: ಮುಸ್ಲಿಮ್ ಸೆಂಟ್ರಲ್ ಕಮಿಟಿ ಸಮಾವೇಶ ಮುಂದೂಡಿಕೆ





m

