Featured, ಸ್ಥಳೀಯ

ಸುಳ್ಯ : ನಿಲುಗಡೆ ಯಾದ ವಿದ್ಯುತ್ : ಮರು ಸರಬರಾಜು ಬಗ್ಗೆ ಅಪ್ಡೇಟ್ !!

ಸುಳ್ಯ : ಇಂದು ಸಂಜೆ ಬೀಸಿದ ಭಾರೀ ಗಾಳಿಯಿಂದಾಗಿ ಹಲವಾರು ಕಡೆ ವಿದ್ಯುತ್ ಕಂಬಗಳು, ವಾಹಕ ತಂತಿಗಳು ಮುರಿದು ಬಿದ್ದು, ಸುಳ್ಯ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಕೆಲವು ಪ್ರದೇಶಗಳಲ್ಲಿ ಮರಗಳು ಉರುಳಿ ರಸ್ತೆಗಳನ್ನು ಅಡ್ಡಗಟ್ಟಿದ್ದು, ಸಾರ್ವಜನಿಕ ಜೀವನಕ್ಕೆ ಅಡಚಣೆ ಉಂಟಾಗಿದೆ. ಸುಳ್ಯ ಮೆಸ್ಕಾಮ್ ಇಲಾಖೆಯ ಸಿಬ್ಬಂದಿ ತಂಡ ನಿಷ್ಕ್ರಿಯಗೊಂಡ ವಾಹಕ ತಂತಿಗಳ ಸಾಲುಗಳನ್ನು ವಿದ್ಯುತ್ ಮರುಸ್ಥಾಪಿಸಲು ದುರಸ್ತಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಇನ್ನೂ ರಾತ್ರಿ 12 ಗಂಟೆಯ ಒಳಗಡೆ ವಿದ್ಯುತ್ ಮರು ಸರಬರಾಜು ಆಗಲಿದೆ ಎಂದು ಮೆಸ್ಕಾಮ್ ಸುಳ್ಯ ಅಧಿಕಾರಿಗಳು ಇವಾರ್ತೆ ಗೆ ತಿಳಿಸಿರುತ್ತಾರೆ

m

 

Related Posts