Featured, ಇತರೆ, ಸ್ಥಳೀಯ

ಸುಳ್ಯ : ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲೂಕು ಸಮಿತಿ ಇದರ ಆಶ್ರಯದಲ್ಲಿ ಯಶಸ್ವಿಯಾಗಿ ನಡೆದ ಅದಾ‌ರ್ ತಿದ್ದುಪಡಿ ಮತ್ತು ನೋಂದಣಿ ಶಿಬಿರ

ಸರಕಾರಿ ಸೇವೆ ಗಳು ಸಾರ್ವಜನಿಕರಿಗೆ ಸುಲಭದಲ್ಲಿ ದೊರಕುವಂತೆ ಆಗಬೇಕು : ಮೊಹನ್ ಎಮ್ ಕೆ

ಸುಳ್ಯ : ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ  ತಾಲೂಕು ಸಮಿತಿ ಇದರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು  ವಿಭಾಗ,ಇವಾರ್ತೆ ಡಿಜಿಟಲ್ ಮೀಡಿಯಾ ಇದರ ಸಹಕಾರದಿಂದ, ಜೂನ್ 13  ಮತ್ತು  ಜೂನ್ 14 ರಂದು ( ಶುಕ್ರವಾರ ಮತ್ತು ಶನಿವಾರ)  ಅದಾ‌ರ್ ತಿದ್ದುಪಡಿ ಮತ್ತು ನೋಂದಣಿ ಶಿಬಿರ ಯಶಸ್ವಿಯಾಗಿ ನಡೆಯಿತು

ಸುಮಾರು 150 ಜನ ಶಿಬಿರದ ಪ್ರಯೋಜನವನ್ನು ಪಡೆದರು. ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಆಗಮಿಸಿದ ಸುಳ್ಯ ಪ್ರದಾನ ಅಂಚೆ ಕಛೇರಿಯ ಅಂಚೆ ಪಾಲಕರಾದ ಮೊಹನ್ ಎಮ್ ಕೆ  ಇವರು ಮಾತಾನಾಡಿ ಸುಳ್ಯ ದಲ್ಲಿ ಅದಾರ್ ಸೇವಾ ಕೇಂದ್ರಗಳು ಸುಮಾರು 6 ತಿಂಗಳಿಂದ ಕಾರ್ಯಾಚರಿಸದೆ ಸಾರ್ವಜನಿಕರು ಬಹಳ ತೊಂದರೆ ಪಡುವಂತಾಗಿದೆ. ಈ ನಿಟ್ಟಿನಲ್ಲಿ ನಲ್ಲಿ ನಮ್ಮ ಇಲಾಖೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಾ ಬರುತ್ತಿದ್ದು ಸರಕಾರಿ ಸೇವೆಗಳು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಆಗಬೇಕು ಎಂದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ, MYF ಅದ್ಯಕ್ಷ ಉಮ್ಮರ್ ಕೆ ಎಸ್


ಈ ಮೊದಲು ನಮ್ಮ ಸಂಸ್ಥೆ ಉಚಿತ ಆರೋಗ್ಯ ಶಿಬಿರ ಆಯೋಜಿಸಿ ಯಶಸ್ಸಿ ಯಾಗಿದ್ದು. ಇದೀಗ ಅದಾ‌ರ್ ತಿದ್ದುಪಡಿ ಮತ್ತು ನೋಂದಣಿ ಶಿಬಿರದಲ್ಲಿ ಸುಮಾರು 150 ಮಂದಿ ಪ್ರಯೋಜನ ಪಡೆದರು ಎಂದರು ಸುಳ್ಯ ಪತ್ರಕರ್ತ ಸಂಘದ ಅಧ್ಯಕ್ಷ ರಾದ ಶರೀಫ್ ಜಟ್ಟಿಪಳ್ಳ ಮಾತನಾಡಿ ಸುಳ್ಯ ದಲ್ಲಿ ಅಧಾರ್ ಸೇವಾ ಕೇಂದ್ರ ಇಲ್ಲದೆ ತಿದ್ದುಪಡಿ ಮತ್ತು ಹೊಸ ನೋಂದಣಿ ಮಾಡಿಸಲು ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ ಇ ನಿಟ್ಟಿನಲ್ಲಿ MYF ಸೇವೆ ಶ್ಲಾಘನೀಯ, ಮಾತ್ರವಲ್ಲ ಸರಕಾರ ಕೊಡಲೆ ಸುಳ್ಯ ಕ್ಕೆ ಆಗುತ್ತಿರುವ ಸಮಸ್ಯೆಗೆ ಪರಿಹಾರ ಮಾಡಬೇಕು ಎಂದರು, MYF ಇದರ ಸದಸ್ಯರಾದ ಉನೈಸ್ ಪೆರಾಜೆ, ಇಕ್ಬಾಲ್ ಸುಣ್ಣಮೂಲೆ ಮಾತನಾಡಿದರು. ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಸುಳ್ಯ ಇದರ ಅಧ್ಯಕ್ಷರಾದ ಎಸ್ ಅಬ್ಬುಲ ಕಟ್ಟೆಕ್ಕಾರ್ ಇವರು ಅಂಚೆ ಪಾಲಕರಾದ ಮೋಹನ್ ಇವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು, ಎರಡು ದಿನಗಳ ಕಾಲ ತಾಳ್ಮೆ ಯಿಂದ ಅದಾರ್ ನೊಂದಣಿ ಮತ್ತು ತಿದ್ದುಪಡಿ ನಡೆಸಿಕೊಟ್ಟ  ಅಪರೇಟರ್, ಕೃಪೇಶ್ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು, ಕಾರ್ಯಕ್ರಮ ದಲ್ಲಿ, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಇದರ ಉಪಾಧ್ಯಕ್ಷ ರಾದ ಎಸ್ ಪಿ ಅಬ್ಬೂಬಕ್ಕರ್ ,ಯೂಸುಫ್ ಅಂಜಿಕ್ಕಾರ್ ಉಪಸ್ಥಿತರಿದ್ದರು, ಕಬೀರ್ ಜಟ್ಟಿಪಳ್ಳ ಸ್ವಾಗತಿಸಿ ವಂದಿಸಿದರು ರಶೀದ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು

ಈ ಶಿಬಿರ ನಮ್ಮಂತ ವಿಧ್ಯಾರ್ಥಿಗಳಿಗೆ ತುಂಬಾ ಅನುಕೂಲ ವಾಯುತು, ಅದಾರ್ ತಿದ್ದುಪಡಿ ಮಾಡಲು ಸುಳ್ಯ ದಲ್ಲಿ ಅದಾರ್ ಸೇವಾ ಕೆಂದ್ರ ವಿಲ್ಲದೆ ಸಮಸ್ಯೆ ಎದುರಾಗಿತ್ತು, ವ್ಯವಸ್ಥೆ ಮಾಡಿಕೊಟ್ಟ ಸಂಸ್ಥೆಗೆ ಧನ್ಯವಾದಗಳು. : ಅರ್ಚನಾ, ವಿದ್ಯಾರ್ಥಿನಿ

ಸುಳ್ಯ ದಲ್ಲಿ ಆಧಾರ್ ಸೇವೆ ಅಲಭ್ಯ ವಾಗಿದ್ದು ಆರೋಗ್ಯ ಸಂಬಂದಿಸಿದ ಕಾರ್ಯಕ್ಕೆ ಅಗತ್ಯ ಆಧಾರ್ ತಿದ್ದುಪಡಿ ಅಗ ಬೇಕಿತ್ತು ಇಂದಿನ ಶಿಬಿರದಲ್ಲಿ ಅದು ಸಾಧ್ಯ ವಾಯಿತ್ತು : ಅಬುಬಕ್ಕರ್

m

Related Posts