ನವದೆಹಲಿ, ಜೂನ್ 18: ಇನ್ನುಮುಂದೆ ಮತದಾರರಿಗೆ ವೋಟರ್ ಐಡಿ ಕಾರ್ಡ್ಗಳನ್ನು ಕೇವಲ 15 ದಿನಗಳೊಳಗೆ ತಲುಪಿಸಲಾಗುತ್ತದೆ ಎಂದು ಭಾರತೀಯ ಚುನಾವಣಾ ಆಯೋಗ (Election Commission of India) ಮಹತ್ವದ ಘೋಷಣೆ ಮಾಡಿದೆ. ಈ ಮೂಲಕ ವೋಟರ್ ಐಡಿ ಪಡೆಯುವ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡುವ ಮೂಲಕ ಪ್ರಕ್ರಿಯೆಯನ್ನು ವೇಗಗೊಳಿಸಲಾಗಿದೆ.
ಈವರೆಗೆ ಹೊಸ ಮತದಾರರ ನೋಂದಣಿಯ ಬಳಿಕ ಅಥವಾ ಅಸ್ತಿತ್ವದಲ್ಲಿರುವ ಮತದಾರರ ವಿವರಗಳಲ್ಲಿ ಬದಲಾವಣೆ ಮಾಡಿದ ಬಳಿಕ, ಮತದಾರರ ಫೋಟೋ ಗುರುತಿನ ಚೀಟಿ (EPIC) ತಲುಪಲು 30 ದಿನಗಳಿಗಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತಿತ್ತು. ಆದರೆ ಹೊಸ ಕ್ರಮದ ಅಡಿ ಈ ಗಡಿಯನ್ನು 15 ದಿನಗಳಿಗೆ ಇಳಿಸಲಾಗಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ಆಯೋಗವು ಈ ಉದ್ದೇಶಕ್ಕಾಗಿ ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನ (Standard Operating Procedure – SOP)ವನ್ನು ಜಾರಿಗೆ ತಂದಿದ್ದು, ಮತದಾರರ ನೋಂದಣಿ ಅಧಿಕಾರಿಗಳು (Electoral Registration Officers – ERO) EPIC ಸಿದ್ಧಗೊಳ್ಳುವ ಹಂತದಿಂದ ಆರಂಭಿಸಿ, ಅಂಚೆ ಇಲಾಖೆ ಮೂಲಕ ಮತದಾರರಿಗೆ ವೋಟರ್ ಕಾರ್ಡ್ ತಲುಪುವವರೆಗೆ ಪ್ರತಿಯೊಂದು ಹಂತವನ್ನು ನೈಜ-ಸಮಯದಲ್ಲಿ ಟ್ರ್ಯಾಕ್ ಮಾಡುವ ವ್ಯವಸ್ಥೆ ಒದಗಿಸಲಾಗಿದೆ.
ಈ ಹೊಸ ಕ್ರಮದಿಂದ ಮತದಾರರಿಗೆ ವೇಗವಾಗಿ ಮತ್ತು ಸುಲಭವಾಗಿ ಕಾರ್ಡ್ ತಲುಪಲು ಸಾಧ್ಯವಾಗುತ್ತದೆ, ಜೊತೆಗೆ ಚುನಾವಣಾ ಪ್ರಕ್ರಿಯೆಯ ಮೇಲಿನ ನಂಬಿಕೆಯೂ ಮತ್ತಷ್ಟು ಬಲಪಡಲಿದೆ ಎಂದು ಆಯೋಗ ಭರವಸೆ ನೀಡಿದೆ.






m

