Featured, ಅಂಕಣ, ಸ್ಥಳೀಯ

ಗ್ರಾಮಪಂಚಾಯತ್ ಅಧ್ಯಕ್ಷರಿಂದ ಅನುಚಿತ ವರ್ತನೆ ಆರೋಪ: ಶೈಲೇಶ್ ಅಂಬೆಕಲ್ಲು ವಿರುದ್ಧ ಮಹಿಳೆಯಿಂದ ದೂರು!

ಸುಬ್ರಹ್ಮಣ್ಯ: ದೇವಚಳ್ಳ ಗ್ರಾಮಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲುರವರ ಮೇಲೆ ಮಹಿಳೆಯೋರ್ವರು ಅನುಚಿತ ವರ್ತನೆಯ ಆರೋಪ ಹೊರಿಸಿ, ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ವರದಿಯಾಗಿದೆ.

ದೂರಿನ ಪ್ರಕಾರ, ಶೈಲೇಶ್ ಅಂಬೆಕಲ್ಲು ಸ್ವಸಹಾಯ ಸಂಘದ ಮಹಿಳೆಯೊಬ್ಬರನ್ನು ಗ್ರಾಮಪಂಚಾಯತ್ ಬಳಿಯಿಂದ ತನ್ನ ಕಾರಿನಲ್ಲಿ ಮನೆಗೆ ಕರೆದೊಯ್ದಿದ್ದರು. ಅಲ್ಲಿ ಅವರು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದರೆಂದು ಆರೋಪಿಸಲಾಗಿದೆ. ಅನುಚಿತ ವರ್ತನೆಯನ್ನು ಮಹಿಳೆ ವಿರೋಧಿಸಿ ತಪ್ಪಿಸಿಕೊಂಡು ತನ್ನ ಪತಿಗೆ ಘಟನೆಯನ್ನು ತಿಳಿಸಿದ್ದಾರೆ. ನಂತರ ಪೋಲೀಸರಿಗೆ ದೂರು ನೀಡಲಾಗಿದೆ ಎನ್ನಲಾಗಿದೆ.

ಈ ಪ್ರಕರಣವನ್ನು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದಾಖಲು ಮಾಡಿರುವುದಾಗಿ ತಿಳಿದುಬಂದಿದೆ.

m

Related Posts