ನಗರಾಡಳಿತದ ಮೌನಕ್ಕೆ ಯಾರ ಒತ್ತಾಸೆ?
ಸುಳ್ಯ : ಸುಳ್ಯ ಬಸ್ ನಿಲ್ದಾಣ ಬಳಿ ಇರುವ ಖಾಸಗಿ ವಾಣಿಜ್ಯ ಸಮುಚ್ಚಯ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ವಾಹನಗಳು ಯರ್ರಾಬಿರ್ರಿ (ಪಾರ್ಕಿಂಗ್) ನಿಲುಗಡೆಮಾಡಿ ಆ ರಸ್ತೆಯಾಗಿ ಸಾಗುವ ವಾಹನ, ಪಾದಚಾರಿ, ವಿಧ್ಯಾರ್ಥಿಗಳಿಗೆ ಬಾರಿ ತೊಂದರೆ ಆಗುತ್ತಿದ್ದು ಆ ಭಾಗದ ಒರ್ವ ನಿವಾಸಿ ತಮ್ಮ ಅಸಮಾಧಾನವನ್ನು ಇ-ವಾರ್ತೆಗೆ ತಿಳಿಸಿರುತ್ತಾರೆ.

ಈ ಸನ್ನಿವೇಶ ವರ್ಷಗಳಿಂದ ಮುಂದುವರಿಯುತ್ತಿದ್ದು, ಪಾರ್ಕಿಂಗ್ ( ನಿಲುಗಡೆ)ಗೆ ಅನುವು ಇಲ್ಲದ ಸಾರ್ವಜನಿಕ ಸ್ಥಳದಲ್ಲಿ ವಾಹನ ನಿಲ್ಲಿಸುವುದು ಎಷ್ಟು ಸರಿ? ಇದರ ಬಗ್ಗೆ ಹಲವು ಬಾರಿ ನಗರ ಪಂಚಾಯತ್ ಗೆ ಮನವಿ ಮಾಡಿದರು ನಗರ ಆಡಳಿತ ಸುಮ್ಮನೆ ಕುಳಿತ್ತುಕೊಳ್ಳುವುದು ಯಾಕೆ? ಈ ಮೊದಲು ಇದೇ ಸ್ಥಳದಲ್ಲಿ ರಾತ್ರಿ ಹೊತ್ತು ಒಬ್ಬರು ಬಡಪಾಯಿ ಹೊಟ್ಟೆ ಪಾಡಿಗಾಗಿ ಚಿಕ್ಕ ತಳ್ಳುಗಾಡಿ ಇಟ್ಟು ವ್ಯಾಪಾರ ಮಾಡುತ್ತಿದ್ದ ಸಮಯದಲ್ಲಿ ಉಳ್ಳವರ ಒತ್ತಡದಿಂದ ನಗರಾಡಳಿತ ಓಡೋಡಿ ಬಂದು ತಳ್ಳುಗಾಡಿಯನ್ನು ತೆಗೆಸಿದ ಪ್ರಸಂಗ ನಡೆದಿತ್ತು, ಇದೀಗ ವರ್ಷಗಳೇ ಕಳೆದರೂ ಪಾರ್ಕಿಂಗ್ ಅನುವು ಇಲ್ಲದ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕ ವಿರೋಧದ ನಡುವೆಯೂ ಪಾರ್ಕಿಂಗ್ ಅನುವು ಮಾಡಿಕೊಟ್ಟಿರುವುದು ಯಾರ ಒತ್ತಾಸೆಗೆ ಎಂಬುದು ನಗರಾಡಳಿತ ಉತ್ತರಿಸಬೇಕಿದೆ.!
ಈ ವಿಚಾರವಾಗಿ ಕೊನೆಯ ಬಾರಿಗೆ ನಗರಾಡಳಿತಕ್ಕೆ ದೂರು ಸಲ್ಲಿಸುತ್ತೇವೆ ಮಾತ್ರವಲ್ಲ ಈ ದೂರಿನ ಪ್ರತಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಕಳಿಸುತ್ತೆವೆ ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಸಮಸ್ಯೆ ಪರಿಹಾರ ಆಗದಿದ್ದರೆ ಬ್ಯಾರಿ ಕ್ಯಾಡ್ ಹಾಕಿ ರಸ್ತೆತಡೆ, ಪ್ರತಿಭಟನೆ ಮಾಡುತ್ತವೆ. ನಗರಾಡಳಿತದ ದ್ವಂದ್ವ ನಿಲುವು ಸಾರ್ವಜನಿಕರು ಒಪ್ಪುವಂತದಲ್ಲ ಎಂದು ದೂರುದಾರ ವ್ಯಕ್ತಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.




m

