“ರಸ್ತೆ ಅಲ್ಲ, ಹಳ್ಳದ ಹದ್ದಿ!” – ಜಯನಗರದ ಹದಗೆಟ್ಟ ಹಾದಿಗೆ ..! ಸುಗಮ ಮುಕ್ತಿ ಎಂದು…??

ಸುಳ್ಯ : ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳು ಕಳೆಯಿತು ಆದರೆ ಇನ್ನೂ ಸಹ ಮೂಲಭೂತ ಸೌಕರ್ಯಗಳು ಸರಿಯಾಗಿ ಸಾಕಾರವಾಗದೆ ಕೊರತೆ ಯಿಂದ ಬಳಲುತ್ತಿವೆ. ಆಂದರೇ ?…ನಂಬಲೇಬೇಕು.!!

ಸುಳ್ಯ : ಜಯನಗರ
ಎರಡು ಜನಪ್ರತಿನಿಧಿ,ವಿಸ್ತಾರವಾದ ಜಂಟಿ ವಾಡ್೯ ಹೊಂದಿರುವ ಜಯನಗರ ಪ್ರದೇಶದ ರಸ್ತೆ ಹದಗೆಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರವಾಗಿ ರಸ್ತೆ ದುರಸ್ತಿ ಪಡಿಸಲು ಸ್ಥಳೀಯ ನಿವಾಸಿಗಳು ನಾಳೆ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಜಯನಗರದ ಪ್ರಮುಖ ರಸ್ತೆ ಮತ್ತು ಒಳ ರಸ್ತೆಗಳು, ಸಂಪೂರ್ಣ ಹದಗೆಟ್ಟು ವಾಹನ ಸಂಚಾರ, ಸಾರ್ವಜನಿಕರಿಗೆ ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ.. ಇದಿಗಾ ಆ ರಸ್ತೆ ಕುದುರೆಗಾಲಿಗೆ ಹೆಚ್ಚು ಸೂಕ್ತವಾಗಿದೆ.. ಎನ್ನಬಹುದು.!! ಕಳೆದ ಹಲವು ತಿಂಗಳಿಂದ ಈ ರಸ್ತೆ ತೀರ ಹದಗೆಟ್ಟಿದ್ದು, ವಾಸ್ತವವಾಗಿ ರಸ್ತೆ ಕಾಣಿಸುವುದು ಕಷ್ಟ – ಅಂದರೆ ರಸ್ತೆ ಹಳ್ಳ ದೆಗ್ಗೆಯಾಗಿ ನಿಂತಿವೆ!….
ಇಲ್ಲಿಯ ಇಬ್ಬರೂ ಜನ ಪ್ರತಿನಿಧಿಗಳ ದಿವ್ಯ ಮೌನಕ್ಕೆ ಅಲ್ಲಿನ ಹದಗೆಟ್ಟ ರಸ್ತೆಯೇ ಸಾಕ್ಷಿ ..!!?? ಎನ್ನುತ್ತಾರೆ ಸ್ಥಳೀಯರು …ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಚಿಂತನೆ ಅವರಲ್ಲಿ ಇಲ್ಲದೆ ಇದ್ದರೇ.? ಸ್ಥಾನಕ್ಕೆ ರಾಜಿನಾಮೆ ನೀಡಿ ಜನಪ್ರತಿನಿಧಿ ಸ್ಥಾನಕ್ಕೆ ಗೌರವ ನೀಡಬೇಕು ಅಲ್ಲವೇ ..? “ಮೂಲಭೂತ ಸೌಕರ್ಯ” ಎನ್ನುವುದು ಪದಮಾತ್ರವೇ ಉಳಿದಂತೆ,ಕಾಣುತ್ತದೆ ಜಯನಗರ ರಸ್ತೆಗೆ ಸಂಬಂಧಿಸಿ. ಸ್ಥಳೀಯ ನಿವಾಸಿಗಳ ಪಾಲಿಗೆ ದಿನವೂ ಜಿಗಿತ, ತುಳಿತ, ಜಂಪಿಂಗ್ ಸ್ಪರ್ಧೆಯಂತೆ ರಸ್ತೆ ದಾಟುವುದು ಕಸರತ್ತಾಗಿದೆ. ಶಾಲಾ ಮಕ್ಕಳಿಂದ ಹಿಡಿದು ವೃದ್ಧರ ತನಕ “ಜೀವನದಲ್ಲಿ ನಾವು ಕೇಪ್‌ಟೌನ್ ಏಡ್ವೆಂಚರ್ ತರ ತರಬೇತಿ ಪಡೆಯುತ್ತಿದ್ದೇವೆ” ಎಂಬ ಲಹರಿಯಲ್ಲಿ ಸಾಗುತ್ತಿದ್ದಾರೆ!

ಈ ಮೊದಲು ರಸ್ತೆ ದುರಸ್ತಿ ಪಡಿಸುವ ವಿಚಾರವಾಗಿ ಹಲವು ಬಾರಿ ನಗರ ಪಂಚಾಯತ್‌ಗೆ ಮನವಿ ಸಲ್ಲಿಸಿದ್ದು – ಫೈಲ್‌ಗಳು ಕೊಠಡಿಯಿಂದ ಬೇರೊಂದು ಕೊಠಡಿಗೆ ವರ್ಗಾವಣೆ ಆಗುವುದಿಲ್ಲ…ರಸ್ತೆ ದುರಸ್ತಿ ಆಗುವುದಿಲ್ಲ..!!? ಸ್ಥಳೀಯ ಜನರು ಇಷ್ಟೆಲ್ಲಾ ಪ್ರಯಾಸ ಪಡುತ್ತಿದ್ದು ನಗರ ಆಡಳಿತ ಇನ್ನೂ ಮೌನ ವಹಿಸಿರುವುದು ಮಾತ್ರ ಜನರ ಆಕ್ರೋಶಕ್ಕೆ ಗುರಿಯಾಗಿದೆ.! ಈಗಾ ಅಲ್ಲಿನ ನಿವಾಸಿಗಳ ತಾಳ್ಮೆ ಕಟ್ಟೊಡೆದಿದೆ. ನಗರ ಆಡಳಿತ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.. ತ್ವರಿತವಾಗಿ ಹದಗೆಟ್ಟ ರಸ್ತೆ ದುರಸ್ತಿ ಯಾಗಬೇಕು ಎಂಬ ನಿಟ್ಟಿನಲ್ಲಿ ನಾಳೆ ಅಲ್ಲಿನ ನಿವಾಸಿಗಳು ಬೃಹತ್ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ. ಮಾತ್ರವಲ್ಲ ಎಲ್ಲಾ ಸಾರ್ವಜನಿಕರ ಸಹಕಾರ ಕೋರಿದ್ದಾರೆ..
ಮೂಲಭೂತ ಸೌಕರ್ಯಗಳ ಕೊರತೆ…! ಪ್ರಜಾಪ್ರಭುತ್ವದ ಅಣಕ ವಲ್ಲವೇ …?!
ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡ ರಾಷ್ಟ್ರ. ಇಲ್ಲಿ ಜನರ ಅಭಿಪ್ರಾಯ, ಹಕ್ಕುಗಳು ಮತ್ತು ಬದುಕಿನ ಗುಣಮಟ್ಟವೇ ಆಡಳಿತದ ಮೂಲ ಉದ್ದೇಶವಾಗಿರಬೇಕು. ಆದರೆ ಈ lofty ideal ಗಳು ಸಾರ್ಥಕವಾಗಲು, ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳ ಲಭ್ಯತೆ ಅತ್ಯಗತ್ಯ. ರಸ್ತೆಗಳು, ಕುಡಿಯುವ ನೀರು, ವಿದ್ಯುತ್, ನಿಕ್ಷಿಪ್ತ ನಿರ್ವಹಣಾ ವ್ಯವಸ್ಥೆ, ಆರೋಗ್ಯ ಸೇವೆ, ಶಿಕ್ಷಣ – ಇವೆಲ್ಲವೂ ಪ್ರತಿ ನಾಗರಿಕನಿಗೆ ಲಭ್ಯವಿರುವುದೇ ನಾಗರಿಕ ಜೀವನದ ತೂಕದ ಅಳತೆ. ಈ ಸೌಲಭ್ಯಗಳು ಇಲ್ಲದಿದ್ದರೆ, ಪ್ರಜಾಪ್ರಭುತ್ವವು ಕೇವಲ ಮತದಾನಕ್ಕೆ ಮಾತ್ರ ಸೀಮಿತವಾದಂತಾಗುತ್ತದೆ.





m

