“ಸೌಹಾರ್ದ ಸಂಚಾರ” ಕೇವಲ ಒಂದು ಕಾರ್ಯಕ್ರಮವಲ್ಲ, ಇದು ಮನಸ್ಸುಗಳ ಸೇತುವೆ, ಭಿನ್ನತೆಯ ನಡುವೆ ಒಂದಾಗುವ ನಿಜವಾದ ಭಾರತದ ಪ್ರತಿರೂಪ. ಸುನ್ನಿ ಯುವಜನ ಸಂಘ ಈ ಮೂಲಕ ಸಹಿಷ್ಣುತೆ ಮತ್ತು ಸಾಂಘಿಕ ಏಕತೆಯ ಶ್ರೇಷ್ಠ ಆದರ್ಶವನ್ನು ಸ್ಥಾಪಿಸಿದೆ.

ಸುಳ್ಯ
ಸುಳ್ಯ: ವಿಭಿನ್ನ ಧರ್ಮ, ಜಾತಿ, ಭಾಷೆಗಳ ನಡುವಿನ ಸೌಹಾರ್ದತೆ, ಸಹಭಾವ ಮತ್ತು ಸಾಮರಸ್ಯವನ್ನು ಉತ್ತೇಜಿಸುವ ಉದ್ದೇಶದಿಂದ “ಸೌಹಾರ್ದ ಸಂಚಾರ” ಇಂದು ಸಂಜೆ ನಾಲ್ಕು ಗಂಟೆಗೆ ಸುಳ್ಯದ ಖಾಸಗಿ ಬಸ್ ನಿಲ್ದಾಣ ಬಳಿಯಿಂದ ಹೊರಟು ಸುಳ್ಯ ಗಾಂಧಿನಗರ ಪೆಟ್ರೋಲ್ ಬಂಕ್ ಬಳಿ ಸಮಾಪನ ಆಗುತ್ತಿದೆ. ನಂತರ ಸಭಾ ಕಾರ್ಯಕ್ರಮ, ಸಂಜೆ 7ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮ.

ಈ ಸಂಚಾರವು ಹಿಂದು, ಮುಸ್ಲಿಂ, ಕ್ರೈಸ್ತ ಸೇರಿದಂತೆ ವಿವಿಧ ಸಮುದಾಯದ ನಾಯಕರು, ಯುವಕರು ಮತ್ತು ಸಂಘಟನಾತ್ಮಕ ನಾಯಕತ್ವ ಹೊಂದಿರುವವರು ಒಂದೇ ವೇದಿಕೆಯಲ್ಲಿ ನಡೆಯುವ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಗಲಿದ್ದಾರೆ. ಮಾನವೀಯ ಮೌಲ್ಯಗಳು, ಪರಸ್ಪರ ಗೌರವ, ಸಹಬಾಳ್ವೆ, ಮತ್ತು ಶಾಂತಿಯ ಸಂದೇಶಗಳ ಸಂದೇಶಗಳನ್ನು ಈ ಸೌಹಾರ್ದ ಸಂಚಾರ ಕಾರ್ಯಕ್ರಮ ಸಾರಲಿದೆ,
ಸಂಚಾರದ ಮೂಲಕಸಮಾಜದಲ್ಲಿ ನಿರಂತರವಾಗಿಬೆಳೆಯುವ ವಿವಾದಾತ್ಮಕ ವಾದಗಳು, ಭಿನ್ನಾಭಿಪ್ರಾಯಗಳು ಮತ್ತು ಧರ್ಮದಹೆಸರಿನಲ್ಲಿನಡೆಯುವ ವಿ ಭಜನೆಗೆ ಪರ್ಯಾಯವಾಗಿ, ಐಕ್ಯತೇಮತ್ತುಭಾತೃತ್ವದ ಬೆಳಕು ಚೆಲ್ಲಲಿದೆ, ಧರ್ಮ,ಜಾತಿ, ಭಾಷೆ, ಅಥವಾ ರಾಜಕೀಯ ನಂಬಿಕೆಗಳ ಹೆಸರಿನಲ್ಲಿ ಉದ್ಭವಿಸುತ್ತಿದೆ ಭಿನ್ನತೆಗಳಿಗೆ ಪ್ರತಿದಾನವಾಗಿ – ಸೌಹಾರ್ದತೆ, ಮಾನವೀಯತೆ ಮತ್ತು ಪರಸ್ಪರ ಗೌರವದ ಧ್ವನಿಯನ್ನು ಸಮರ್ಥವಾಗಿ ಸಮರ್ಪಿಸುತ್ತಿದೆ. ಎಂದು ಸಂಘಟಕರು ತಮ್ಮ ಸಂಸ್ಥೆಯ ಧ್ಯೇಯವನ್ನು ಉಲ್ಲೇಖಿಸಿದ್ದಾರೆ, ಸುಳ್ಯದ ಸರ್ವ ಜನತೆ ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಕಾರ್ಯಕ್ರಮ ಯಶಸ್ವಿಯಾಗಲು ನಿರಂತರವಾಗಿ ದುಡಿಯುತ್ತಿರುವ ಅಬೂಬಕ್ಕರ್ ನ್ಯಾಯವಾದಿ ಅಡ್ಕಾರು, ಮಹಮ್ಮದ್ ಕುಂ ಗೂನಡ್ಕ, ಕೆ ಎಂ ಮುಸ್ತಫಾ, ಸಿದ್ದೀಕ್ ಗೂನಡ್ಕ, ಹಮೀದ್ ಬೀಜಕೊಚ್ಚಿ, ಹಮೀದ್ ಸುಣ್ಣಮೂಲೆ, ಅಬೂಬಕ್ಕರ್ ಕೆ ಎ ಜಟ್ಟಿಪಳ್ಳ ಮುಂತಾದವರು ಮನವಿ ಮಾಡಿಕೊಂಡಿದ್ದಾರೆ.





m

