Featured, ಇತರೆ, ಸ್ಥಳೀಯ

ABJM ಸುಣ್ಣಮೂಲೆ ಮೀಲಾದ್ ಸಮಿತಿ ರಚನೆ: ಪೈಗಂಬರ್ ಸ.ಅ.ರವರ 1500ನೇ ಜನ್ಮದಿನಾಚರಣಿಗೆ ಭವ್ಯ ಸಿದ್ಧತೆ

ಸುಳ್ಯ, ಆಗಸ್ಟ್ 12:
ಪೈಗಂಬರ್ ಮುಹಮ್ಮದ್ ಮುಸ್ತಫಾ (ಸ.ಅ.) ರವರ 1500ನೇ ಜನ್ಮದಿನಾಚರಣಿಯ ಪ್ರಯುಕ್ತ, ಅಹ್ಮದುಲ್ ಬದವೀ ಜಮಾಅತ್ ಕಮಿಟಿ ಸುಣ್ಣಮೂಲೆ ಇದರ ಆಶ್ರಯದಲ್ಲಿ ನೂತನ ಮೀಲಾದ್ ಸಮಿತಿ ರಚನೆಗೊಂಡಿದೆ.

ಈ ಸಮಿತಿಯಲ್ಲಿ ಎ.ಕೆ. ಅಬ್ದುಲ್ ಮಜೀದ್ ಅವರನ್ನು ಚೇರ್ಮೆನ್ ಆಗಿ, ಕೆ.ಎಂ. ಹಸನ್ ಅವರನ್ನು ಕನ್ವೀನರ್ ಆಗಿ ಹಾಗೂ ರವೂಫ್ ಪೆರೋಳಿ ಅವರನ್ನು ಕೋಶಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇದೊಂದಿಗೆ 28 ಮಂದಿ ಸದಸ್ಯರನ್ನು ಸಹ ಸಮಿತಿಗೆ ಆಯ್ಕೆ ಮಾಡಲಾಗಿದೆ.

ಈ ಸಮಿತಿ ಪೈಗಂಬರ್ ಸ.ಅ.ರವರ ಜನ್ಮದಿನ ಆಚರಣೆಯ ಅಂಗವಾಗಿ ನಡೆಯಲಿರುವ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆಯ ಹೊಣೆ ಹೊರುವುದಿದೆ. ಸಮಿತಿ ರಚನೆಯ ಈ ಸಭೆಯಲ್ಲಿ ಜಮಾಅತ್‌ನ ಹಿರಿಯರು, ಪದಾಧಿಕಾರಿಗಳು ಹಾಗೂ ಸ್ಥಳೀಯ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು

m

Related Posts