ಸುಳ್ಯ: ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಸೋಮವಾರ (ಸೆಪ್ಟೆಂಬರ್ 22) ಸುಳ್ಯದಲ್ಲಿ ಚಾಲನೆ ದೊರಕಿತು. ಈ ಸಮೀಕ್ಷೆ ಅಕ್ಟೋಬರ್ 7 ರವರೆಗೆ ಮುಂದುವರಿಯಲಿದೆ.

ಪ್ರಾರಂಭಿಕ ಹಂತದಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾದರೂ, ರೂಟ್ ಮ್ಯಾಪ್ ಪ್ರಕಾರ ಗಲ್ಲಿಗಳಲ್ಲಿನ ಹಾಗೂ ಓಣಿಗಳಲ್ಲಿನ ಮನೆಗಳನ್ನು ಪತ್ತೆಹಚ್ಚಲು ಗಣತಿ ಉಸ್ತುವಾರಿಗಳು ಸ್ಥಳೀಯರ ಸಹಕಾರವನ್ನು ಪಡೆದುಕೊಂಡರು.
ಸುಳ್ಯ ತಹಶೀಲ್ದಾರ್ ಶ್ರೀಮತಿ ಮಂಜುಳಾ ಸ್ವತಃ ಪರಿಶೀಲನೆ ನಡೆಸಿ, ಸಮೀಕ್ಷಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ, ಹಿಂದುಳಿದ ವರ್ಗ ಇಲಾಖೆಯ ಅಧಿಕಾರಿ ಶ್ರೀಮತಿ ಗೀತಾ ಹಾಗೂ ಉಪ ತಹಶೀಲ್ದಾರ್ ಚಂದ್ರಕಾಂತ್ ಮೊದಲಾದವರು ಉಪಸ್ಥಿತರಿದ್ದರು.





m
