Featured, ಇತರೆ, ಸ್ಥಳೀಯ

ಅರಂತೋಡು ಜಮಾಅತ್ ಸೌದಿ ಸಮಿತಿ ವತಿಯಿಂದ ಜುಬೈಲ್‌ನಲ್ಲಿ ಅಶ್ರಫ್ ಗುಂಡಿ ಅವರಿಗೆ ಸನ್ಮಾನ

ಜುಬೈಲ್ (ಸೌದಿ ಅರೇಬಿಯಾ):
ಅರಂತೋಡು ಜಮಾಅತ್ ಸೌದಿ ಸಮಿತಿ ವತಿಯಿಂದ ನ.21ರಂದು ಜುಬೈಲ್‌ನಲ್ಲಿ ನಡೆದ ‘ಗೆಟ್ ಟುಗೆದರ್’ ಕಾರ್ಯಕ್ರಮದಲ್ಲಿ, ಉಮ್ರಾ ಯಾತ್ರೆಯಲ್ಲಿರುವ ಅರಂತೋಡು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷ ಮೊಹಮ್ಮದ್ ಕಮಾಲ್ ಅವರು ಅಶ್ರಫ್ ಗುಂಡಿ ಅವರಿಗೆ ಶಾಲು ಹೊದ್ದು ಸ್ಮರಣಿಕೆ ನೀಡಿ ಸನ್ಮಾನಿಸಿದರು. ನಂತರ ನಡೆದ ದುವಾವನ್ನು ಮೊಹಮ್ಮದ್ ಮದನಿ ಉಸ್ತಾದ್ (ದಮ್ಮಮ್) ನೆರವೇರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ ಸೌದಿ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್, 17 ವರ್ಷಗಳ ಕಾಲ ಅರಂತೋಡು ಜಮಾಅತ್‌ನ ಕಾರ್ಯದರ್ಶಿಯಾಗಿ ಹಾಗೂ ಪ್ರಸ್ತುತ 6 ವರ್ಷಗಳಿಂದ ಅಧ್ಯಕ್ಷರಾಗಿ ಸ್ನೇಹಪೂರ್ಣವಾಗಿ, ಉತ್ತಮ ಆಡಳಿತದೊಂದಿಗೆ ಜಮಾಅತ್ ಅನ್ನು ಮುನ್ನಡೆಸುತ್ತಿರುವ ಅಶ್ರಫ್ ಗುಂಡಿ ಅವರ ಸೇವೆಯನ್ನು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶ್ರಫ್ ಗುಂಡಿ ಅವರು, ಸದಸ್ಯರು ಅಲ್ಪ ಸಂಖ್ಯೆಯಾದರೂ ಅರಂತೋಡು ಜಮಾಅತ್‌ನ ಸೌದಿ ಮತ್ತು ದುಬೈ ಸಮಿತಿಗಳು ನಮ್ಮ ಎರಡು ಕಣ್ಣುಗಳಂತೆ. ವಿಶೇಷವಾಗಿ ಸೌದಿ ಸಮಿತಿಯವರು ಇತರರಿಗೂ ಮಾದರಿಯಾದ ಸೇವೆಯನ್ನು ನೀಡುತ್ತಿದ್ದಾರೆ. ಜಮಾಅತ್‌ಗೆ ಸೇರಿದ ಎರಡು ವಿಧವೆಯವರಿಗೆ ಆಹಾರ ಸಾಮಗ್ರಿಗಳ ಖರೀದಿಗೆ ಮಾಸಿಕ ಸಹಾಯಧನವನ್ನು ನೀಡುತ್ತಿರುವುದು ಶ್ಲಾಘನೀಯ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಹಬೀಬ್ ಗುಂಡಿ, ಪದಾಧಿಕಾರಿಗಳಾದ ಸಾಲಿಕ್ ಎಂ., ರವೂಫ್ ಅರಂತೋಡು ಆರಿಕಾಡಿ, ಶೇಕಾಲಿ ಅರಂತೋಡು ಆರಿಕಾಡಿ, ಅಶ್ರಿದ್ ಗುಂಡಿ, ಮುನವರ ಬೈರಿಕಟ್ಟೆ, ಸಾನೀಫ್ ಸುಳ್ಯ, ಸಫ್ವಾನ್ ಮಂಗಳೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Posts