ಸುಳ್ಯ: ಫುಟ್ಬಾಲ್ ಕ್ರೀಡಾಪ್ರೇಮಿಗಳನ್ನು ಹಬ್ಬದ ಸಂಭ್ರಮಕ್ಕೆ ಕರೆದೊಯ್ಯುವಂತೆ, ಗಾಂಧಿನಗರ ಮೈದಾನದಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಫುಟ್ಬಾಲ್ ಕ್ರೀಡಾ ಹಬ್ಬ ಆರಂಭವಾಗಲಿದೆ. ವಿವಿಧ ತಂಡಗಳ ನಡುವಿನ ರೋಚಕ ಪೈಪೋಟಿ, ಕ್ರೀಡಾ ಕೌಶಲ್ಯ, ಮತ್ತು ಪ್ರೇಕ್ಷಕರ ಕೂಗು ಮೈದಾನವನ್ನು ಮತ್ತಷ್ಟು ಜೀವಂತಗೊಳಿಸುವ ನಿರೀಕ್ಷೆ ವ್ಯಕ್ತವಾಗಿದೆ

ಸುಳ್ಯ: ಫುಟ್ಬಾಲ್ ಪೆವಿಲಿಯನ್ ವಾಟ್ಸಾಪ್ ಗ್ರೂಪ್ನ ದಶಮಾನೋತ್ಸವದ ಅಂಗವಾಗಿ, ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಅದ್ದೂರಿ ಡೆ-ನೈಟ್ ಚಾಂಪಿಯನ್ಸ್ ಲೀಗ್ ಫುಟ್ಬಾಲ್ – ಸೀಸನ್ 3 ಪಂದ್ಯಾಟಕ್ಕೆ ನಾಳೆ ಭವ್ಯ ಚಾಲನೆ ದೊರಕಲಿದೆ. ಸುಳ್ಯದ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ಗಳ ಸಹಕಾರದಿಂದ ಆಯೋಜಿಸಲ್ಪಟ್ಟ ಈ ಕ್ರೀಡಾ ಕೂಟದಲ್ಲಿ ಬಲಿಷ್ಠ ಎಂಟು ತಂಡಗಳು ಲೀಗ್ ಮಾದರಿಯಲ್ಲಿ ಪರಸ್ಪರ ಪೈಪೋಟಿ ನಡೆಸಲಿವೆ.
ಫುಟ್ಬಾಲ್ ಕ್ರೀಡಾಪ್ರೇಮಿಗಳನ್ನು ಹಬ್ಬದ ಸಂಭ್ರಮಕ್ಕೆ ಕರೆದೊಯ್ಯುವಂತೆ, ಗಾಂಧಿನಗರ ಶಾಲಾ ಮೈದಾನ ಸಜ್ಜಾಗಿದೆ ಎರಡು ದಿನಗಳ ಕಾಲ ಫುಟ್ಬಾಲ್ ಕ್ರೀಡಾ ಹಬ್ಬ ಭವ್ಯವಾಗಿ ಹಸಿರುಗಾವಲಿನ ಮಧ್ಯೆ ಕಟ್ಟಿದ ವೇದಿಕೆ, ಸಾಲುಸಾಲಾಗಿ ಹಾರಾಡುವ ತಂಡಗಳ ಧ್ವಜಗಳು, ಮತ್ತು ಗಾಳಿಯಲ್ಲಿ ಕ್ರೀಡಾ ಉತ್ಸಾಹದ ದನಿ—ಇವುಗಳೆಲ್ಲವನ್ನು ಒಟ್ಟುಗೂಡಿಸಿರುವ ಈ ಕ್ರೀಡಾ ಹಬ್ಬಕ್ಕೆ ಈಗಾಗಲೇ ಕ್ರೀಡಾಭಿಮಾನಿಗಳ ಕಣ್ಣುಗಳು ನೆಟ್ಟಿವೆ. ಸೀಸನ್ 3 ಟೂರ್ನಿ ಮತ್ತಷ್ಟು ನವೀನತೆಯ ಸ್ಪರ್ಶ ಪಡೆದುಕೊಂಡಿದ್ದು, ಪ್ರೇಕ್ಷಕರನ್ನು ಆಕರ್ಷಿಸುವಂತೆ ಮೈದಾನ ಸಜ್ಜುಗೊಂಡಿದೆ. ರಾತ್ರಿಯ ಬೆಳಕಿನಲ್ಲೇ ನಡೆಯಲಿರುವ ಪಂದ್ಯಗಳು ಆಟಗಾರರ ತಂತ್ರ, ವೇಗ ಮತ್ತು ಸಮನ್ವಯತೆಯನ್ನು ಮತ್ತಷ್ಟು ಚಿತ್ರವಿಚಿತ್ರವಾಗಿ ತೋರಿಸಲಿವೆ. ಲೀಗ್ ಹಂತದಿಂದಲೇ ಪ್ರತಿಯೊಂದು ಪಂದ್ಯವೂ ಘರ್ಷಣಾತ್ಮಕವಾಗಿರಲಿದೆ ಎಂದು ಕ್ರೀಡಾ ಅಭಿಮಾನಿಗಳ ಅಂಬೋಣ
ನಾಳೆ ಮಧ್ಯಾಹ್ನ 3.30ಕ್ಕೆ ಪಂದ್ಯಾಕೂಟಕ್ಕೆ ಚಾಲನೆ
ಲೀಗ್ ಮಾದರಿಯಲ್ಲಿ ಎಂಟು ಬಲಿಷ್ಠ ತಂಡಗಳ ನಡುವೆ ಕೌತುಕ, ಕುತೂಹಲ ಮತ್ತು ನೇರ ರೋಮಾಂಚನಕಾರಿ ಸೆಣಸು ಪಂಧ್ಯಾಟ ನಡೆಯಲಿದ್ದು, ಪಂದ್ಯಕ್ಕೆ ಮಧ್ಯಾಹ್ನ 3.30ಕ್ಕೆ ಚಾಲನೆ ದೊರಕಲಿದೆ. ಭಾಗವಹಿಸುವ ತಂಡಗಳು:
ಜೆ.ಆರ್. ಎಫ್ಸಿ, ಎಮಾರತ್ ಎಫ್ಸಿ, ಬೇಸ್ ಎಫ್ಸಿ, ಸ್ಪೋರ್ಟಿಂಗ್ ಎಫ್ಸಿ ಅರಂಬೂರು, ಅಲ್ಫಾ ಎಫ್ಸಿ, ಪೈಚಾರ್, ಎಫ್ಸಿ ಬಲಟ , ಫೈರ್ ಜಟ್ಟಿಪಳ್ಳ, ಔರಾ ಎಫ್ಸಿ.

ವರ್ಣರಂಜಿತ ಸಭಾ ಕಾರ್ಯಕ್ರಮ ಸಂಜೆ ಏಳು ಗಂಟೆಗೆ
ನಾಳೆ ಸಂಜೆ ಏಳು ಗಂಟೆಗೆ ಸಭಾ ಕಾರ್ಯಕ್ರಮವನ್ನು ವರ್ಣರಂಜಿತವಾಗಿ ಆಯೋಜನೆ ಮಾಡಿದ್ದೇವೆ,” ಎಂದು ಪಂದ್ಯಾಕೂಟದ ಪ್ರಧಾನ ಆಯೋಜಕ ಮುನಾಫರ್ ಅವರು ತಿಳಿಸಿದ್ದಾರೆ. ಆ ನಂತರ ನಡೆಯುವ ಸಿಡಿಮದ್ದು ಪ್ರದರ್ಶನವು ಪ್ರೇಕ್ಷಕರ ಮನರಂಜನೆಗೆ ಹೊಸ ಚೈತನ್ಯ ತುಂಬಿ, ಬಾನಂಗಳದಲ್ಲಿ ಚೆಲುವಿನ ಚಿತ್ತಾರ ಬಿಡಿಸುವಂತಿರಲಿದೆ. ಬೆಳಕು–ಬಣ್ಣಗಳ ಅದ್ಭುತ ವರ್ಣಗಳು ಆಕಾಶವನ್ನು ಮೆರಗುಗೊಳಿಸಿ, ಕ್ರೀಡಾ ಹಬ್ಬದ ಸಂಭ್ರಮಕ್ಕೆ ವಿಶೇಷ ಮೆರಗು ನೀಡಲಿದೆ.”
ರಾಷ್ಟ್ರೀಯ, ಅಂತರರಾಷ್ಟ್ರೀಯ ಐಕಾನ್ ತಾರೆಗಳ ಸಮಾಗಮ
ಈ ಪಂಧ್ಯಾಕೊಟದ ಮತ್ತೊಂದು ವಿಶೇಷತೆ ಎಂದರೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಐಕಾನ್ ಆಟಗಾರರ ಸಮಾಗಮ. ಎಂಟು ತಂಡಗಳಲ್ಲಿ ಪ್ರತಿ ತಂಡದಲ್ಲಿ ತಲಾ ಎರಡು ಆಟಗಾರರನ್ನು ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದ ಪ್ರತಿಭೆಯವರನ್ನಾಗಿ ಆಯ್ಕೆ ಮಾಡಬಹುದು. ಈ ನಿಟ್ಟಿನಲ್ಲಿ, ಪ್ರತಿಯೊಂದು ತಂಡದಲ್ಲಿಯೂ ಅಪ್ರತಿಮ ಪ್ರತಿಭೆಯ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟುಗಳಿಗೆ ಆಡಲು ಅವಕಾಶ ಸಿಗುತ್ತದೆ. ಮಾತ್ರವಲ್ಲ ಕ್ರೀಡಾಪ್ರೇಕ್ಷಕರಿಗೆ ಕೂಡ ಈ ಪಂಧ್ಯಾಕೊಟದಲ್ಲಿ ತಮ್ಮ ಪ್ರಿಯ ಆಟಗಾರರನ್ನು ನೇರವಾಗಿ ನೋಡಲು, ಅವರ ಕೌಶಲ್ಯ ಮತ್ತು ಆಟದ ರೋಚಕತೆಯನ್ನು ಅನುಭವಿಸಲು ಅವಕಾಶ ಸಿಗಲಿದೆ. ತಂಡಗಳ ನಡುವೆ ನಡೆಯುವ ಹಾಟ್ ಸ್ಪರ್ಧೆಗಳು, ಉತ್ಸಾಹಭರಿತ ಕ್ಷಣಗಳು, ಮತ್ತು ಪ್ರೇಕ್ಷಕರ ಜೋಶಭರಿತ ಕೂಗುಗಳು ಪಂದ್ಯಾವಳಿಯನ್ನು ಮತ್ತಷ್ಟು ಆಕರ್ಷಕ ಮತ್ತು ಸ್ಮರಣೀಯವಾಗಿ ಮಾಡುತ್ತವೆ. ಒಟ್ಟಿನಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಸುಳ್ಯದಲ್ಲಿ ನಡೆಯುವ ಫುಟ್ಬಾಲ್ ಕ್ರೀಡೆಗೆ ಹೊಸ ಜೋಶ್ ತುಂಬುವ ಈ ಕ್ರೀಡಾ ಹಬ್ಬ ಸ್ಥಳೀಯ ಕ್ರೀಡಾ ಸಂಸ್ಕೃತಿಗೆ ಮತ್ತೊಂದು ಮೌಲ್ಯಮಯ ಅಧ್ಯಾಯವನ್ನು ನಿಡುವುದಂತೂ ನಿಶ್ಚಿತ.

