ಸೃಷ್ಟಿಯಾದ ಕ್ರೀಡಾ ಸಂಭ್ರಮದ ಕಳೆ
ನೆಲಮೈ ಮೇಲೆ ಹರಡಿದ ಬಣ್ಣಗಳ ಕಿರಣ, ಪ್ರೇಕ್ಷಕರ ಮೆರೆದ ಉತ್ಸಾಹ, ಆತಿಥ್ಯ ಸಮಾರಂಭದ ಗೋಜಿನ ನಡುವೆ ಡೆ–ನೈಟ್ ಲೀಗ್ ಮಾದರಿಯ ಎರಡು ದಿನಗಳ ಪಂಧ್ಯಾಟಕ್ಕೆ ನಿನ್ನೆ ಸಾಯಂಕಾಲ ಭವ್ಯ ಚಾಲನೆ ದೊರೆಯಿತು. ಪ್ರಥಮ ದಿನದ ಎಲ್ಲಾ ಪಂದ್ಯಗಳು ರೋಚಕ ಕೌಶಲ್ಯ ಪ್ರದರ್ಶನಕ್ಕೆ ಸಾಕ್ಷಿಯಾದವು.

ಸುಳ್ಯ: ಫುಟ್ಬಾಲ್ ಪೆವಿಲಿಯನ್ ವಾಟ್ಸಾಪ್ ಗ್ರೂಪ್‌ನ ದಶಮಾನೋತ್ಸವದ ಅಂಗವಾಗಿ ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾದ ಡೆ–ನೈಟ್ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ – ಸೀಸನ್ 3ರ ಮೊದಲ ಹಂತದ ಲೀಗ್ ಪಂದ್ಯಾಟ ವರ್ಣರಂಜಿತವಾಗಿ ಜರುಗಿತು. ಗಾಂಧಿನಗರ ಮೈದಾನವು ಪ್ರೇಕ್ಷಕರ ದಟ್ಟಣೆಯಿಂದ ಕಂಗೊಳಿಸುತ್ತಿದ್ದು, ಸುಳ್ಯದ ಫುಟ್ಬಾಲ್ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದ ಜನಾಕರ್ಷಣೆ ಪಡೆದ ಪಂಧ್ಯಾ ಕೂಟ ಇದುವರೆಗೆ ನಡೆದಿರಲಿಲ್ಲ ಎಂಬುದು ವಿಶೇಷ
ಮನರಂಜಿಸಿದ ಎಕ್ಸ್ಟಸಿ ನೃತ್ಯ ತಂಡದ ನೃತ್ಯ ಪ್ರದರ್ಶನ
ಸುಳ್ಯ ಎಕ್ಸ್ಟಸಿ ನೃತ್ಯ ತಂಡದ ಸದಸ್ಯರು ನೀಡಿದ ನೃತ್ಯ ಕಾರ್ಯಕ್ರಮವು ಪ್ರೇಕ್ಷಕರ ಮನರಂಜಿಸಿತು.ಸೊಗಸಾದ ಹೆಜ್ಜೆಗಳು, ಲಯಬದ್ಧ ಕಲಾಪ್ರದರ್ಶನಗಳು ಮತ್ತು ತಂಡದ ಸಮನ್ವಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದು ಪುಟಾಣಿ ಮಕ್ಕಳ ನೃತ್ಯ ಪ್ರದರ್ಶನ. ಅವರ ಹೆಜ್ಜೆಯ ಚುರುಕು ನೃತ್ಯ ನಿಜಕ್ಕೂ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಅದೇ ವೇಳೆ ನೃತ್ಯದೊಂದಿಗೆ ಕಸರತ್ತು ಹಾಗೂ ಕವಾಯತು ಒಳಗೊಂಡ ಪ್ರದರ್ಶನಗಳು ನೋಡುಗರಲ್ಲಿ ಬೆರಗು ಹುಟ್ಟಿಸಿತು. ತಂಡದ ಚಮತ್ಕಾರಿಕ ಚಲನೆಗಳು ಮತ್ತು ಲಯಬದ್ಧ ಸಂಯೋಜನೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದವು.

ಗೋಲು ರಹಿತ ಸಮಬಲದ ಮೊದಲ ಮೂರು ಪಂದ್ಯಗಳು

ಔರಾ ಎಫ್‌ಸಿ vs ಎಮರಾಟ್ ಎಫ್‌ಸಿ, ಬೇಸ್ ಎಫ್‌ಸಿ vs ಬಲಟಾ ಎಫ್‌ಸಿ, ಸ್ಪೋರ್ಟಿಂಗ್ ಎಫ್‌ಸಿ vs ಫೈರ್ ಜಟ್ಟಿಪಳ್ಳ ಈ ಮೂರು ಪಂದ್ಯಗಳಲ್ಲೂ ಎರಡೂ ತಂಡಗಳಿಗೆ ಗೋಲು ಮಾಡುವ ಹಲವು ಅವಕಾಶಗಳನ್ನು ಸೃಷ್ಟಿಸಿದರೂ, ಗೋಲ್ಮುಖದಲ್ಲಿ ಬಲಿಷ್ಠ ರಕ್ಷಣಾ ಆಟ ಗೋಲನ್ನು ತಡೆದು, ಪಂದ್ಯಗಳು ಸಮಬಲ ಕುತೂಹಲದ ಅಂಚಿನಲ್ಲಿ ಮುಕ್ತಾಯಗೊಂಡವು. ಮೈದಾನದ ತಳಪಾಯದಲ್ಲಿ ಪ್ರತಿದಿನವೂ ಬರೆಯುವ ಕ್ರೀಡಾ ಕಾವ್ಯದಂಥಾ ಕ್ಷಣಗಳು ಪ್ರೇಕ್ಷಕರನ್ನು ತಡೆಯಲಾಗದ ರೋಚಕತೆಗೆ ಕರೆದೊಯ್ದವು

ಮೊದಲ ಗೋಲು ಬಾರಿಸಿದ ಅಬ್ಬು ಎರಿಯಾಲ್
ಅಲ್ಪಾ Fc ತಂಡದ ಐಕಾನ್ ಆಟಗಾರ ಅಬ್ಬು ಎರಿಯಾಲ್ ಇವರು ಪಂದ್ಯಕೂಟದ ಮೊದಲ ಗೋಲು ದಾಖಲಿಸಿದರು ಇವರು JR Fc ವಿರುದ್ಧ ನಡೆದ ಪಂದ್ಯದಲ್ಲಿ ಪಂದ್ಯಾಟದ ದ್ವಿತೀಯ ಕ್ಷಣಾರ್ಧದಲ್ಲಿ ಎದುರಾಳಿ ತಂಡದ ರಕ್ಷಣಾ ಪಡೆಯನ್ನು ಭೇದಿಸಿ ಗೋಲು ಬಾರಿಸಿದರು
ಮಿಂಚಿದ, ಉದಯೋನ್ಮುಖ ಪ್ರತಿಭೆ ಕರಾರ್ ಪೈಚಾರ್, ಹಾಗೂ ನಿಖೀಲ್ ವಯನಾಡ್, ಅಶ್ಪಾಕ್ ಸುಳ್ಯ, ನಾಝಿ
ಲೀಗ್ ಮಾದರಿಯ ಎಲ್ಲಾ ಪಂದ್ಯಗಳು ನಿನ್ನೆ ರೋಮಾಂಚನಕಾರಿ ತಿರುವುಗಳೊಂದಿಗೆ ನಡೆಯಿತು. ಮೈದಾನದಲ್ಲಿ ಪ್ರತೀ ಕ್ಷಣವೂ ಹೊಸ ಕಥೆಯನ್ನು ಬರೆಯುವಂತೆ, ಕ್ರೀಡಾಪಟುಗಳು ತಮ್ಮ ಶ್ರೇಷ್ಠ ಕೌಶಲ್ಯ, ವೇಗ ಮತ್ತು ಮನೋಬಲವನ್ನು ಮೆರೆದರು. ಪಂದ್ಯ ಆರಂಭದಿಂದ ಅಂತಿಮ ಹಂತದವರೆಗೆ ತಂಡಗಳ ಪೈಪೋಟಿ ಉತ್ಕಂಠೆ ತುಂಬಿತ್ತು. ದಾಳಿಯ ಚುರುಕು, ರಕ್ಷಣೆಯ ದಿಟ್ಟ ನಿಲುವು, ಗೋಲು ಪ್ರದೇಶದ ಪೈಪಾಟ. ಪ್ರೇಕ್ಷಕರ ಕೂಗು ಮೈದಾನವನ್ನು ಮತ್ತಷ್ಟು ಜ್ವಲಂತವನ್ನಾಗಿಸಿತು. ಅದರಲ್ಲೂ ಕರಾರ್, ನಿಖೀಲ್ ವಯನಾಡ್, ಅಶ್ಪಾಕ್ ಮತ್ತು ನಾಝಿ (ನಾಸೀರ್) ಇವರ ಆಕ್ರಮಣಕಾರಿ, ಚುರುಕು ಮತ್ತು ಸರ್ವತೋಮುಖ ಆಟ ಮೈದಾನದಲ್ಲಿ ರೋಚಕ ಕ್ಷಣಗಳನ್ನು ತಂದುಕೊಟ್ಟು ಪ್ರೇಕ್ಷಕರ ಮನರಂಜಿಸಿದರು. ಟೂರ್ನಿಯ ಪ್ರಥಮ ಹಂತದಲ್ಲೇ ಇವರ ಪ್ರದರ್ಶನ ಗಮನ ಸೆಳೆಯುವಂತಿತ್ತು. ಒಟ್ಟಿನಲ್ಲಿ ಮುನಾಫರ್ ಇವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಪಂದ್ಯಕೂಟ ಸುಳ್ಯದಲ್ಲಿ ನೂತನ ಇತಿಹಾಸ ಸೃಷ್ಟಿಸಲಿದೆ.


