Featured, ಇತರೆ, ಸ್ಥಳೀಯ

ಸೌದಿ–ಯುಎಇಯಲ್ಲಿ ಚಂದ್ರದರ್ಶನ ದೃಢ: ಗಲ್ಫ್ ರಾಜ್ಯ ಗಳಲ್ಲಿ ನಾಳೆಯಿಂದ ರಮಝಾನ್ ಉಪವಾಸ ಆರಂಭ

ರಿಯಾದ್, ಫೆ. 17: ಸೌದಿ ಅರೇಬಿಯಾದಲ್ಲಿ ಪವಿತ್ರ ರಮಝಾನ್ ತಿಂಗಳ ಚಂದ್ರದರ್ಶನ ದೃಢಪಟ್ಟಿರುವುದಾಗಿ ಅಧಿಕಾರಿಗಳು ಅಧಿಕೃತವಾಗಿ ಘೋಷಿಸಿದ್ದಾರೆ. ಇದರೊಂದಿಗೆ ನಾಳೆಯಿಂದ ಗಲ್ಫ್  ದೇಶದಾದ್ಯಂತ ರಮಝಾನ್ ಉಪವಾಸ ಆರಂಭವಾಗಲಿದೆ.
ಚಂದ್ರದರ್ಶನಕ್ಕಾಗಿ ಮೊದಲು ಪ್ರಕಟಿಸಿದಂತೆ ಅಲ್-ಮಜ್ಮಾ’ಹ್ ಗವರ್ನರೇಟ್‌ನ ಹೌತತ್ ಸುಡೈರ್ ಹಾಗೂ ತುಮೈರ್ ಪ್ರದೇಶಗಳಲ್ಲಿ ವೀಕ್ಷಣೆ ನಡೆಸಲಾಗಿತ್ತು. ವಿಶೇಷವಾಗಿ ಹೌತತ್ ಸುಡೈರ್ ಮತ್ತು ತುಮೈರ್ ಪ್ರದೇಶಗಳಲ್ಲಿ ಚಂದ್ರನ ವೀಕ್ಷಣೆ ಯಶಸ್ವಿಯಾಗಿ ನಡೆದಿರುವುದಾಗಿ ಚಂದ್ರದರ್ಶನ ಸಮಿತಿ ತಿಳಿಸಿದೆ.
ಇದೇ ಘೋಷಣೆಯನ್ನು ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ) ಸಹ ಅನುಸರಿಸಿದ್ದು, ಅಲ್ಲಿಯೂ ನಾಳೆಯಿಂದ ಪವಿತ್ರ ರಮಝಾನ್ ಉಪವಾಸ ಪ್ರಾರಂಭವಾಗಲಿದೆ.
ಚಂದ್ರದರ್ಶನ ಸಮಿತಿಯ ಅಧಿಕೃತ ಪ್ರಕಟಣೆಯ ನಂತರ ದೇಶದಾದ್ಯಂತ ಮಸೀದಿಗಳು ಮತ್ತು ಇಸ್ಲಾಮಿಕ್ ಸಂಸ್ಥೆಗಳು ರಮಝಾನ್ ಆಚರಣೆಗೆ ಅಗತ್ಯ ಸಿದ್ಧತೆಗಳನ್ನು ಆರಂಭಿಸಿವೆ. ಮುಸ್ಲಿಮರು ತರವೀಹ್ ನಮಾಜ್ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಸಜ್ಜಾಗುತ್ತಿದ್ದಾರೆ.

Related Posts