ಆತ್ಮಸಂಸ್ಕರಣೆಯ ಉಪವಾಸ ವ್ರತ ದಾನಧರ್ಮಗಳಿಂದ ಧನ್ಯಗೊಳ್ಳುತ್ತದೆ – ಕೆ.ಎಂ. ಮುಸ್ತಫಾ
ಸುಳ್ಯ: ಪವಿತ್ರ ರಮಝಾನ್ ತಿಂಗಳ ಪ್ರಯುಕ್ತ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಸುಳ್ಯ ತಾಲೂಕು ಘಟಕದ ವತಿಯಿಂದ ಸುಳ್ಯ ತಾಲೂಕಿನ 100 ಅರ್ಹ ಫಲಾನುಭವಿ ಕುಟುಂಬಗಳಿಗೆ ದಿನನಿತ್ಯ ಉಪಯೋಗದ ಸುಮಾರು ರೂ. 2 ಲಕ್ಷ ಮೌಲ್ಯದ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮವು ಗಾಂಧಿನಗರದಲ್ಲಿರುವ ಸಂಸ್ಥೆಯ ಕಚೇರಿ ವಠಾರದಲ್ಲಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಅಡ್ವೊಕೇಟ್ ಮೂಸ ಕುಂಞ ಪೈಂಬಚ್ಚಾಲ್ ವಹಿಸಿದ್ದರು.
ಸಮಾರಂಭವನ್ನು ಕಿಟ್ ವಿತರಿಸುವ ಮೂಲಕ ಉದ್ಘಾಟಿಸಿದ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಎಂ. ಮುಸ್ತಫ ಮಾತನಾಡಿ, “ಪವಿತ್ರ ರಮಝಾನ್ ತಿಂಗಳು ಬಡವರ ಹಸಿವಿನ ಅರಿವು ಮೂಡಿಸಲು ಇಸ್ಲಾಂ ಧರ್ಮವು ಕಡ್ಡಾಯ ಉಪವಾಸವನ್ನು ವಿಧಿಸಿದೆ. ಉಪವಾಸ ವ್ರತವು ಆತ್ಮಸಂಸ್ಕರಣೆಗೆ ದಾರಿ ತೋರಿಸುವುದರ ಜೊತೆಗೆ ದಾನಧರ್ಮಗಳ ಮೂಲಕ ದೇವರ ಸಂತೃಪ್ತಿಯನ್ನು ಗಳಿಸಲು ಸಹಕಾರಿ ಆಗುತ್ತದೆ,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಇಬ್ರಾಹಿಂ ಹಾಜಿ ಕತ್ತರ್ (ಮಂಡೆಕೋಲು), ಇಕ್ಬಾಲ್ ಎಲಿಮಲೆ, ಹಸೈನಾರ್ ವಳಲಂಬೆ, ಶಾಫಿ ಕುತ್ತಾಮೊಟ್ಟೆ, ಅಬ್ದುಲ್ ಖಾದರ್ ಸಂಗಮ್, ಹಸೈನಾರ್ ಹಾಜಿ ಗೊರಡ್ಕ, ಅಬೂಬಕ್ಕರ್ ಪಾರೆಕ್ಕಲ್, ಅಮೀರ್ ಕುಕ್ಕುಂಬಳ, ಎಸ್.ಪಿ. ಅಬೂಬಕ್ಕರ್, ಡಾ. ಮಹಮ್ಮದ್ ಕುಂಭಕ್ಕೊಡು, ಇಬ್ರಾಹಿಂ ನೀರಾಬಿದಿರೆ (ದುಗ್ಗಲಡ್ಕ), ಹಂಝ ದುಗ್ಗಲಡ್ಕ ಹಾಗೂ ಎಸ್.ಕೆ. ಹನೀಫ್ ಕಲ್ಲುಗುಂಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು


