ಇತರೆ, ಸ್ಥಳೀಯ

ಸುಳ್ಯ ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್‌ನಲ್ಲಿ ಸೌಹಾರ್ದ ಇಫ್ತಾರ್ ಸಂಗಮ

ಸುಳ್ಯದ ಜನತೆಯ ಪ್ರೀತಿಗೆ ನಾನು ಚಿರಋಣಿ : ಹೆಚ್.ಎಂ. ನಂದಕುಮಾರ್

ಸುಳ್ಯ: ಮುಸ್ಲಿಮರ ಪವಿತ್ರ ರಂಜಾನ್ ತಿಂಗಳ 19ನೇ ಉಪವಾಸದ ಪ್ರಯುಕ್ತ ಸುಳ್ಯ ಜಯನಗರದ ಜನ್ನತುಲ್ ಉಲೂಮ್ ಮಸ್ಜಿದ್ ಮತ್ತು ಮದ್ರಸ ಆಶ್ರಯದಲ್ಲಿ ಸೌಹಾರ್ದ ಇಫ್ತಾರ್ ಸಂಗಮ ಕಾರ್ಯಕ್ರಮ ಮದ್ರಸ ವಠಾರದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಡಿಕೇರಿ ಉದ್ಯಮಿ ಹಾಗೂ ಕೆಪಿಸಿಸಿ ಸಂಯೋಜಕ ಹೆಚ್.ಎಂ. ನಂದಕುಮಾರ್ ಮಾತನಾಡಿ, ಸುಳ್ಯದ ಜನತೆ ಭೇದಭಾವ ಮರೆತು ಎಲ್ಲರನ್ನು ಪ್ರೀತಿಯಿಂದ ಕಾಣುವವರು. ಇದರಿಂದ ನಿಜವಾದ ಸೌಹಾರ್ದತೆಯ ವಾತಾವರಣ ನಿರ್ಮಾಣವಾಗುತ್ತದೆ. ಕಳೆದ 8 ವರ್ಷಗಳಿಂದ ಸುಳ್ಯದೊಂದಿಗೆ ಹೊಂದಿದ ಒಡನಾಟ ನನಗೆ ಅವಿಸ್ಮರಣೀಯವಾಗಿದೆ ಎಂದು ಹೇಳಿದರು. ಜೊತೆಗೆ ಜಯನಗರ ಮಸ್ಜಿದ್ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲು ಬದ್ದನಾಗಿರುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಗ್ಯಾರಂಟಿ ತಾಲೂಕು ಸಮಿತಿ ಸದಸ್ಯ ಭವಾನಿ ಶಂಕರ್ ಕಲ್ಮಡ್ಕ, ಉದ್ಯಮಿ ಮಹಮ್ಮದ್ ಅಲಿ ಕುಂತೂರ್, ಶ್ರೀ ಶಾರದಾಂಭ ಸೇವಾ ಸಮಿತಿ ಗೌರವಾಧ್ಯಕ್ಷ ಗೋಕುಲದಾಸ್, ಮಂಜುನಾಥ್ ಮಡ್ತಿಲ ಸೇರಿದಂತೆ ಮದ್ರಸ ಹಾಗೂ ಮಸ್ಜಿದ್ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನವಾಜ್ ಪಂಡಿತ್ ಹಾಗೂ ಗುತ್ತಿಗೆದಾರ ಝಹೀರ್ ಜಯನಗರ ಅವರು ಹೆಚ್.ಎಂ. ನಂದಕುಮಾರ್ ಮತ್ತು ಮಹಮ್ಮದ್ ಅಲಿ ಅವರಿಗೆ ಗೌರವಾರ್ಪಣೆ ಸಲ್ಲಿಸಿದರು.
ಪತ್ರಕರ್ತ ಹಸೈನಾರ್ ಜಯನಗರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರಾರ್ಥನಾ ಸಂಗಮ ಹಾಗೂ ಅನ್ನದಾನ ಕಾರ್ಯಕ್ರಮ ನಡೆಯಿತು.

 

Related Posts