Featured, ಇತರೆ, ಸ್ಥಳೀಯ

ಸುಳ್ಯ: ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ವಿಶೇಷ ಪ್ರಾರ್ಥನೆ, ಈದ್ ಸಂದೇಶ

ಇಸ್ಲಾಮ್ ನಲ್ಲಿ ಹಬ್ಬಗಳ ಸಂಭ್ರಮಗಳು ಆರಾಧನೆಯ ಭಾಗ : ಆಶ್ರಫ್ ಕಾಮೀಲ್ ಸಖಾಫಿ

ಸುಳ್ಯ, ಮಾ.20: ಸುಳ್ಯ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಹಬ್ಬದ ಅಂಗವಾಗಿ ವಿಶೇಷ ಪ್ರಾರ್ಥನೆಗಳನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು. ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಮಾಜ್ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಜುಮಾ ಮಸೀದಿಯ ಖತೀಬ್ ರಾದ ಆಶ್ರಫ್ ಕಾಮೀಲ್ ಸಖಾಫಿ ಈದ್ ಸಂದೇಶ ನೀಡಿ ಮಾತನಾಡುತ್ತಾ  ಇಸ್ಲಾಂ ಧರ್ಮದಲ್ಲಿ ಹಬ್ಬಗಳ ಸಂಭ್ರಮಗಳು   ಆರಾಧನೆಯ ಭಾಗವಾಗಿವೆ. ವಿಶೇಷವಾಗಿ ಹಬ್ಬಗಳ ಸಂದರ್ಭಗಳಲ್ಲಿ ಪ್ರಾರ್ಥನೆ, ದಾನಧರ್ಮ, ಸಹೋದರತ್ವ ಮತ್ತು ಸೌಹಾರ್ದತೆಗಳನ್ನು ಉತ್ತೇಜಿಸುವುದು ಮುಖ್ಯ ಉದ್ದೇಶವಾಗಿರುತ್ತದೆ.
ಆದರೆ ಸಂಭ್ರಮಗಳನ್ನು ಮಿತಿಮೀರಿ ಆಚರಿಸುವುದು, ಅತಿರೇಕದ ಪ್ರದರ್ಶನಗಳು, ಅಸಭ್ಯ ವರ್ತನೆಗಳು ಹಾಗೂ ಧಾರ್ಮಿಕ ಮೌಲ್ಯಗಳಿಗೆ ವಿರುದ್ಧವಾದ ಚಟುವಟಿಕೆಗಳು ನಡೆಯುವ ಸಂದರ್ಭಗಳಲ್ಲಿ, ಅದು ಅಧರ್ಮದ ದಾರಿಯತ್ತ ಕೊಂಡೊಯ್ಯುವ ಅಪಾಯವಿದೆ ಎಂದರು.ಇಂತಹ ಅತಿರೇಕವು ದೈವಾನುಗ್ರಹವನ್ನು ಕಳೆದುಕೊಳ್ಳುವಂತೆ ಮಾಡಬಹುದು. ಬದಲಾಗಿ, ದೈವಶಾಪಕ್ಕೆ ತುತ್ತಾಗುವ ಸಾಧ್ಯತೆಯೂ ಇರುವುದಾಗಿ ಎಚ್ಚರಿಕೆ ನೀಡಿದರು. ಹಬ್ಬದ ನಿಜವಾದ ಅರ್ಥವನ್ನು ಮನಗಂಡು, ದಾನಧರ್ಮ, ಸಹೋದರತ್ವ ಮತ್ತು ಸೌಹಾರ್ದತೆಯನ್ನು ವೃದ್ಧಿಸುವ ದಿಸೆಯಲ್ಲಿ ಎಲ್ಲರೂ ನಡೆದುಕೊಳ್ಳಬೇಕು ಎಂದು ಅವರು ಈದ್ ಸಂದೇಶದಲ್ಲಿ ಕರೆ ನೀಡಿದರು. ಪ್ರಾರ್ಥನೆಯ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಸತ್ಯ ವಿಶ್ವಾಸಿಗಳು, ಹಬ್ಬದ ಸಂತೋಷವನ್ನು ಹಂಚಿಕೊಂಡರು.
m

Related Posts