ಸುಳ್ಯ, ಏಪ್ರಿಲ್ 9: ಸುಳ್ಯದಲ್ಲಿರುವ ರೋಟರಿ ಪಿ.ಯು. ಕಾಲೇಜಿನ ವಿದ್ಯಾರ್ಥಿನಿ ಝೈನಬತ್ ಲೀಝಾ ಕಟ್ಟೇಕಾರ್ ಅವರು 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 580 ಅಂಕಗಳನ್ನು ಪಡೆದು ವಾಣಿಜ್ಯ ವಿಭಾಗದಲ್ಲಿ ಕಾಲೇಜು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಇವರು ಸುಳ್ಯದ ಕಟ್ಟೇಕಾರ್ ಕುಟುಂಬದವರಾಗಿದ್ದು, ಸಾಮಾಜಿಕ ಕಾರ್ಯಕರ್ತ ಹಾಗೂ SYS ಮುಖಂಡ ಅಬೂಬಕರ್ ಸಿದ್ದೀಕ್ ಕಟ್ಟೇಕಾರ್ ಅವರ ಪುತ್ರಿ ಮತ್ತು ಸುಳ್ಯದ ಮುಸ್ಲಿಂ ಸಮುದಾಯದ ಚೈತನ್ಯವಾಗಿದ್ದ ದಿವಂಗತ ಅಬ್ಬಾಸ್ ಹಾಜಿ ಕಟ್ಟೇಕಾರ್ ಅವರ ಮೊಮ್ಮಗಳು ಆಗಿದ್ದಾರೆ.
ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ ಝೈನಬತ್ ಅವರ ಸಾಧನೆಯನ್ನು ಶಿಕ್ಷಕರು ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ. ಅವರ ಈ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಪರಿಣಮಿಸಿದೆ.




m
