ಸುಳ್ಯ: ಕಮ್ಮಾಜೆಯ ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ, ಸುಳ್ಯ ಜಟ್ಟಿಪಳ್ಳ ನಿವಾಸಿ ದೀಕ್ಷಿತ್ ಸಿ ಎಸ್ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ. ಅವರು 600 ಅಂಕಗಳಲ್ಲಿ 581 ಅಂಕಗಳನ್ನು ಗಳಿಸಿ ಶೇ. 96.83 ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.
ದೀಕ್ಷಿತ್ ಸಿ ಎಸ್ ಅವರು ಜಟ್ಟಿಪಳ್ಳದ ಚಂದ್ರಶೇಖರ ನಾಯ್ಕ ಎಸ್ ಹಾಗೂ ಸುಶೀಲಾ ಪಿ ದಂಪತಿಗಳ ಪುತ್ರರಾಗಿದ್ದಾರೆ. ಇವರ ಸಾಧನೆಗೆ ಕುಟುಂಬದವರು, ಶಿಕ್ಷಕರು ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ





m
