Featured, ಇತರೆ, ಸ್ಥಳೀಯ

ಮಂಗಳೂರು: ಮಹಿಳೆಯರಿಗಾಗಿ ಆರೋಗ್ಯ ಮಾಹಿತಿ ಶಿಬಿರ

ಆಮ್ ಆದ್ಮಿ ಪಕ್ಷದಿಂದ ಆರೋಗ್ಯ ಜಾಗೃತಿ ಜೊತೆಗೆ ಕೌಶಲ್ಯ ತರಬೇತಿ

ಮಂಗಳೂರು: ಆಮ್ ಆದ್ಮಿ ಪಕ್ಷ ಮಂಗಳೂರು ವತಿಯಿಂದ ಮಹಿಳೆಯರಿಗಾಗಿ ಆರೋಗ್ಯ ಮಾಹಿತಿ ಶಿಬಿರವನ್ನು ಏಪ್ರಿಲ್ 11ರಂದು ಡಾನ್ ಬಾಸ್ಕೋ ಹಾಲ್ ಸಮೀಪದ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಯಿತು.

ಡಾ. ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ದೀಪ ಬೆಳಗಿ ಶಿಬಿರವನ್ನು ಉದ್ಘಾಟಿಸಿ, ಮೆನೋಪಾಸ್ ಕುರಿತು ಮಹಿಳೆಯರಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು. ಮಹಿಳಾ ಘಟಕದ ಅಧ್ಯಕ್ಷೆ ಸೀಮಾ ಮಡಿವಾಳ ಸ್ವಾಗತ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಾನನ್ ಪಿಂಟೋ, ಜಿಲ್ಲಾ ಮಾಧ್ಯಮ ಸಂಚಾಲಕ ವೆಂಕಟೇಶ್ ಬಾಳಿಗಾ, ಮಹಿಳಾ ಘಟಕದ ಸದಸ್ಯೆ ಸುಜಾತ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಪ್ರಸಾದ್ ಬಜಿಲಕೇರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟೇಶ್ ಬಾಳಿಗಾ, “ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಜನಹಿತ ಕಾರ್ಯಗಳನ್ನು ಕೈಗೊಂಡು ಇತರ ಪಕ್ಷಗಳಿಗೆ ಮಾದರಿಯಾಗಿರುವ ಆಮ್ ಆದ್ಮಿ ಪಕ್ಷ, ಮಂಗಳೂರು ಪರಿಸರದಲ್ಲಿಯೂ ಇಂತಹ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ಲಾವಿನ್ ಪ್ರಾರ್ಥನೆ ನೆರವೇರಿಸಿದರು. ವಿದ್ಯಾ ರಾಕೇಶ್ ಅವರು ಕೇಶ ವಿನ್ಯಾಸ, ಸರಳ ಮೇಕಪ್ ಹಾಗೂ ಸೀರೆ ಧರಿಸುವಿಕೆ ಕುರಿತ ತರಬೇತಿ ನೀಡಿದರು. ಸುಮಾರು 50 ಮಹಿಳೆಯರು ಶಿಬಿರದ ಪ್ರಯೋಜನ ಪಡೆದುಕೊಂಡರು. ಜಯರಾಮ್ ಶೆಟ್ಟಿ ಅಲ್ತಾರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

m

Related Posts