Featured, ಇತರೆ, ಸ್ಥಳೀಯ

ರಿಫಾ ಟಿ.ಎ.ಗೆ ವಾಣಿಜ್ಯ ವಿಭಾಗದಲ್ಲಿ 580 ಅಂಕಗಳೊಂದಿಗೆ ಡಿಸ್ಟಿಂಕ್ಷನ್ – ಸುಳ್ಯ ರೋಟರಿ ಪಿ.ಯು. ಕಾಲೇಜಿನ ವಿಧ್ಯಾರ್ಥಿನಿ

ಸುಳ್ಯ: ಇಲ್ಲಿನ ರೋಟರಿ ಪಿ.ಯು. ಕಾಲೇಜಿನ ವಿದ್ಯಾರ್ಥಿನಿ, ಸುಳ್ಯ ಕಡಮಕಲ್ಲು ನಿವಾಸಿ ರಿಫಾ ಟಿ.ಎ. ಪಾಲಡ್ಕ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 600ರಲ್ಲಿ 580 ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ಸಾಧನೆಯೊಂದಿಗೆ ಅವರು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಮೂಲತಃ ಸುಳ್ಯ ಕಡಮಕಲ್ಲು ನಿವಾಸಿ  ಪ್ರಸ್ತುತ ಸುಳ್ಯ ಅರಂಬೂರು ಪಾಲಡ್ಕದಲ್ಲಿ ವಾಸವಿರುವ ಸಲಾಮ್ ಹಾಗೂ ಫಾತಿಮಾ ದಂಪತಿಯ ಪುತ್ರಿ ರಿಫಾ ಅವರ ಈ ಸಾಧನೆಗೆ ಕುಟುಂಬದವರು, ಶಿಕ್ಷಕರು ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದ್ದಾರೆ.
m

Related Posts