Featured, ಇತರೆ, ಸ್ಥಳೀಯ

ಭೂಮಿಯ ಮೇಲಿನ ಯಾವುದೇ ಶಕ್ತಿ ನನ್ನನ್ನು ಮುಟ್ಟಲು ಅಥವಾ ಈ ಚಳುವಳಿಯನ್ನು ತಡೆಯಲು ಸಾಧ್ಯವಿಲ್ಲ : TVK ಸ್ಥಾಪಕ ನಟ ವಿಜಯ್

ತಿರುನಲ್ವೇಲಿಯಲ್ಲಿ ವಿಜಯ್ ಪ್ರಭಾವಿ ಭಾಷಣ: ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ, ವೈಯಕ್ತಿಕ ಬದುಕಿನ ವಿಚಾರಕ್ಕೂ ಪರೋಕ್ಷ ಸ್ಪರ್ಶ

ತಮಿಳಗ ವೆಟ್ರಿ ಕಳಗಂ (TVK) ನಾಯಕ ವಿಜಯ್ ಅವರು ತಿರುನಲ್ವೇಲಿಯ ಕೆಟಿಸಿ ನಗರ (ಪಾಲಯಂಕೊಟ್ಟೈ ಕ್ಷೇತ್ರ)ದಲ್ಲಿ ನಡೆದ ಪ್ರಮುಖ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. “ನನ್ನ ಹೃದಯದಲ್ಲಿ ವಾಸಿಸುವ ತಿರುನಲ್ವೇಲಿಯ ಜನರಿಗೆ ನಮಸ್ಕಾರಗಳು” ಎಂದು ಹೇಳುತ್ತಾ ತಮ್ಮ ಭಾಷಣವನ್ನು ಆರಂಭಿಸಿದರು.
ಭಾಷಣದ ವೇಳೆ ಡಿಎಂಕೆ ವಿರುದ್ಧ ತೀವ್ರ ಟೀಕೆ ನಡೆಸಿದ ಅವರು, “ಡಿಎಂಕೆ ಸಂಪೂರ್ಣ ಅಧಿಕಾರದಲ್ಲಿದ್ದರೆ, ಈ ಕಾರ್ಯಕ್ರಮವನ್ನು ತಡೆಯಲು ಅಡೆತಡೆಗಳನ್ನು ಸೃಷ್ಟಿಸುತಿದ್ದಿತು” ಎಂದು ಆರೋಪಿಸಿದರು. ಡಿಎಂಕೆ ಮತ್ತು ಬಿಜೆಪಿ ಬೇರೆ ಬೇರೆ ಪಕ್ಷಗಳಂತೆ ಕಾಣಿಸಿದರೂ, ತಮ್ಮ ವಿರುದ್ಧ ಒಂದಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದರು.
ಇದೇ ವೇಳೆ, ತಮ್ಮ ರಾಜಕೀಯ ಪಯಣದಲ್ಲಿ ಕಾಂಗ್ರೆಸ್ ಪಕ್ಷ ನಿಜವಾದ ಬೆಂಬಲ ನೀಡಿದೆ ಎಂದು ಅವರು ಉಲ್ಲೇಖಿಸಿದರು. “ನನ್ನ ‘ಜನ ನಾಯಗನ್’ ಚಿತ್ರವನ್ನು ನಿರ್ಬಂಧಿಸಲು ಯತ್ನಿಸಿದರು. ನನ್ನ ಮೇಲೆ ಪರಿಣಾಮ ಬೀರಲಿಲ್ಲ. ನನ್ನನ್ನು ಕುಗ್ಗಿಸಲು SOP ಜಾರಿಗೊಳಿಸಿದರೂ ಅದು ವಿಫಲವಾಯಿತು” ಎಂದು ಹೇಳಿದರು.
ಭಾಷಣದ ಮಧ್ಯೆ, ವೈಯಕ್ತಿಕ ಜೀವನದ ವಿಚಾರಕ್ಕೂ ವಿಜಯ್ ಪರೋಕ್ಷವಾಗಿ ಸ್ಪರ್ಶಿಸಿದರು. ಪತ್ನಿಯ ಹೆಸರನ್ನು ಉಲ್ಲೇಖಿಸದೆ, ಕುಟುಂಬದ ಬೆಂಬಲದ ಮಹತ್ವವನ್ನು ವಿವರಿಸಿದರು. “ನನ್ನ ಸುತ್ತಲಿನ ಜನರನ್ನು ಬಳಸಿಕೊಂಡು ನನ್ನ ವೈಯಕ್ತಿಕ ಜೀವನದ ಮೇಲೆ ದಾಳಿ ಮಾಡಲು ಚುನಾವಣಾ ಸಮಯವನ್ನು ಬಳಸಿಕೊಂಡರು. ಆದರೆ ಅದೂ ವಿಫಲವಾಯಿತು. ಭೂಮಿಯ ಮೇಲಿನ ಯಾವುದೇ ಶಕ್ತಿ ನನ್ನನ್ನು ಅಥವಾ ಈ ಚಳುವಳಿಯನ್ನು ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದರು.
ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ವಿಜಯ್ ಅವರ ವೈಯಕ್ತಿಕ ಬದುಕಿನ ಬೆಳವಣಿಗೆಗಳೊಂದಿಗೆ ಸಂಬಂಧಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 2025 ಡಿಸೆಂಬರ್ 5ರಂದು ವಿಜಯ್ ಪತ್ನಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾಗಿ, ಫೆಬ್ರವರಿ 27ರಂದು ಈ ವಿಷಯ ಮಾಧ್ಯಮಗಳಿಗೆ ಸೋರಿಕೆಯಾಗಿತ್ತು ಎಂದು ವರದಿಯಾಗಿದೆ.
m

Related Posts